ಹರಿಯುತಿಹಳು ಅದಿರೆಂಬ ಕಾಂಚಾಣ

ಹರಿಯುತಿಹಳು ಅದಿರೆಂಬ ಕಾಂಚಾಣ

ಬರಹ

ಈಗೆ ೨ ವರ್ಷಗಳ ಹಿಂದೆ ಅಂದರೆ, ಅಂತಿಮ ಪದವಿಯಲ್ಲಿ ಓದುತ್ತಿದ್ದಾಗ ಶಿಕ್ಷಣಿಕ ಪ್ರವಾಸ ಕೈಗೊಂಡಿದ್ದೆವು. ಆ ಸಮಯದಲ್ಲಿ ಕುದುರೆಮುಖದ ಮುಖಾಂತರ ನಾವು ಪ್ರಯಾಣಿಸಿದಾಗ "ಲಕ್ಯಾ" ಡ್ಯಾಂಗೆ ಭೇಟಿ ಮಾಡಿದ್ರಿ. ಆದರೆ ಆ ಡ್ಯಾಂ ನಲ್ಲಿ ನಮಗೆ ನೀರಿನ ಬದಲು ಬರೀ ರಾಡಿ ಅಥವಾ ಕೆಸರನ್ನು ಕಂಡು ಸಪ್ಪೆ ಮೋರೆಯಿಂದ ಬರಬೇಕಾಯ್ತು.

ರಾಜ್ಯ ಸರ್ಕಾರದ ಕುದುರೆಮುಖ ಅದಿರು ಕಂಪನಿಯ, ಸಂಸ್ಕರಣದ ನಂತರ ಅಲ್ಲಿ ಉತ್ಪತಿಯಾದ ತ್ಯಾಜ್ಯ ಈ ಡ್ಯಾಂಗೆ ಹರಿದು ನೀರಿನ ಮೂಲ ರೂಪವನ್ನು ಅಳಿಸಿ ಹಾಕಿತ್ತು. ಆದ್ರೆ ಅನೇಕ ಜನಪರ ಸಂಘಟನೆಗಳ ಸತತ ಹೋರಾಟಗಳು ನಿರಂತರ ನಡೆದು, ಕಡೆಗೆ ಹೈಕೋರ್ಟ್‌ ಅಣತಿಯಂತೆ ಕುದುರೆಮುಖ ಎಂಬ ಸರ್ಕಾರಿ ಲಾಭದ ಸಂಸ್ಥೆಯ ಗಣಿಗಾರಿಕೆ ಸ್ತಬ್ಧ ಮಾಡುವಲ್ಲಿ ಸಫಲವಾಗಿರುದು ಈಗ ಇತಿಹಾಸ.

ಇನ್ನು ಬಳ್ಳಾರಿ ಗಣಿಗಾರಿಕೆಗೆ ಪುಲ್‌ ಸ್ಟಾಪ್‌ ಎಂದು ಎಂಬುದು ನನ್ನ ಪ್ರಶ್ನೆ. ರಾಜ್ಯ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕಾರ್ಯಗೊಳ್ಳುವುದೇ? ಗಣಿ ಧಣಿಗಳ ಹಿಡಿತದಲ್ಲಿರುವ ಸರ್ಕಾರಕ್ಕೆ ಗಣಿ ಸಂಪತ್ತು ರಕ್ಷಿಸಲು ಮುಂದಾಗಬೇಕಿದೆ. ಇಲ್ಲಿ ಸರ್ಕಾರಕ್ಕೆ ಬರಬಹುದಾದ ಲಾಭ ಎಷ್ಟು. ಒಂದು ಟನ್‌ ಅದಿರಿಗೆ ಕೇವಲ ೨೭ ರೂಪಾಯಿ ರಾಜಧನ ನೀಡಿ ಅಧಿಕ್‌ಋತವಾಗಿ ಸಾಗಿಸಿದರೆ, ಅನಧಿಕ್‌ಋತವಾಗಿ ೫ ಟನ್‌ ಅದಿರು ಅಲ್ಲಿಂದ ನುಸುಳಿರುತ್ತೆ ಎಂಬುದು ಗುಪ್ತವಾಗಿ ಉಳಿದಿಲ್ಲ. ಅಂದರೆ ಒಂದಕ್ಕೆ ೫ ಪಟ್ಟು ಅಕ್ರಮವಾಗಿ ಸಾಗಿದ ಅದಿರು ಬೇಲೇಕಲ್‌, ಕಾರವಾರ ಹಾಗೂ ಮಂಗಳೂರಿನ ಬಂದರುಗಳಿಗೆ ಸೇರುತ್ತದೆ. ಬಳ್ಳಾರಿಯ ಆಸುಪಾಸಿನಲ್ಲಿ ಲೂಟಿ ಮಾಡಲಾಗುತ್ತಿರುವ ಅದಿರಿನಲ್ಲಿ ಶೇ ೮೦ ರಷ್ಟು ಚೀನಾಕ್ಕೆ ಜಲಸಾರಿಗೆಯ ಮೂಲಕ ನಿರಾಂತಕವಾಗಿ ಹರಿಯುತ್ತಿದೆ.

ಗಣಿ ಕಾರ್ಮಿಕರ ಗುಡಿಸಲುಗಳ ಮೇಲೆ ಮಾಲೀಕರ ಹೆಲಿಕ್ಯಾಪ್ಟರ್‌ಗಳು ಹಾರಾಟದ ಝೇಂಕಾರ ಕೇಳಿ ಬರುತ್ತಿದೆ. ಸರಿಯಾದ ರಸ್ತೆ, ಕುಡಿಯುವ ನೀರು, ಆರೋಗ್ಯ ಹಾಗೂ ಶಿಕ್ಷಣದಿಂದ ವಂಚಿತರಾಗುತ್ತಿರುವ ಈ ಭಾಗದ ಗಣಿ ಕಾರ್ಮಿಕರಿಗೆ ಹೈಕೋರ್ಟ್ ಸಲಹೆಯಂತೆ ಗಣಿಗಾರಿಕೆ ರಾಷ್ಟ್ರೀಕರಣವಾದ್ರೆ ಮುಕ್ತಿ ದೊರೆಯುವ ಹಾದಿ ಸುಲಭವೇ?

ಗಣಿ ಧಣಿಗಳ ಹಗಲು ದರೋಡೆಗೆ ಕತ್ತರಿ ಬೀಳುವ ನಿಟ್ಟಿನಲ್ಲಿ ಹೈಕೋರ್ಟ್‌‌ನ ತೀರ್ಪು ಮಹತ್ವದ್ದಾಗಿದೆ. ಗಣಿಗಾರಿಕೆ ರಾಷ್ಟ್ರೀಕರಣ ಮಾಡಿ ಅರಣ್ಯ ಸಂಪತ್ತು ಮುಂದಿನ ಪೀಳಿಗೆಗೆ ಉಳಿಸುವ ಜರೂರತೆ ಸರ್ಕಾರ ಕೈಗೊಳ್ಳಲಿ. ಇಲ್ಲದಿದ್ದರೆ ಅಮೇರಿಕಾ ತೈಲೋತ್ಪನ್ನ ನಿಕ್ಷೇಪ ಸುಮಾರು ೧ ಶತಮಾನಕ್ಕೆ ಆಗುವಷ್ಟು ಹೊಂದಿದ್ದರೂ, ಅದನ್ನು ಬಳಸದೆ ಸಂಪನ್ಮೂಲ ಕ್ರೌಢೀಕರಣದ ಮಹಾದಾಸೆಯಿಂದ ಕೊಲ್ಲಿ ರಾಷ್ಟ್ರಗಳ ರಕ್ತವನ್ನು ಹೀರುತ್ತಿದೆ. ಅದೇ ರೀತಿ ಕೆಂಪು ನಾಡಿನಲ್ಲಿ ಅಪಾರ ಪ್ರಮಾಣದ ಖನಿಜ ಸಂಪನ್ಮೂಲ ಹೊಂದಿದ್ದರೂ ಭಾರತದಂತಹ ಹಣ ವ್ಯಾಮೋಹ ದೇಶವನ್ನು ಬರದಾಗಿಸುತ್ತಿದೆ.

ಇಂದಿನ ಸರ್ಕಾರದ ಆಧಾರ ಸ್ಥಂಭಗಳೇ ಈ ಗಣಿ ಧಣಿಗಳು. ಒಂದು ಪಕ್ಷ ಅವರ ಅವಕ್‌ಋಪೆಗೆ ತುತ್ತಾದರೆ ಸರ್ಕಾರದ ಬುಡಕ್ಕೆ ಅದರ ಮೊದಲ ಹೊಡೆತ ಬೀಳುವುದಂತು ಸತ್ಯ. ಹೀಗಿರುವಾಗ ಈಗಿನ ಸರ್ಕಾರ ಹೈಕೋರ್ಟ್‌ ತೀರ್ಪನ್ನು ಪಾಲಿಸುವುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಗಣಿಗಾರಿಕೆ ರಾಷ್ಟ್ರೀಕರಣ, ರಾಷ್ಟ್ರೀಯ ಸಂಪತ್ತಿನ ರಕ್ಷಣೆ ಎಂಬ ವೇದ ವಾಕ್ಯಗಳು ಕೇವಲ ಉದ್ಘೋಷಕರ ಮಾತಾಗಬಾರದು. ಪ್ರಾಕ್‌ಋತಿಕ ಸಂಪತ್ತು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯವಾಗಿಸುವತ್ತ ಮುನ್ನಗ್ಗಬೇಕಿದೆ. ಗಣಿಗಾರಿಕೆಗೆ ಅಂಕುಶವಿಡುವ ಹೈಕೋರ್ಟ್‌ ತೀರ್ಪು ಬ್ರಹ್ಮಾಸ್ತ್ರವಾಗಿ ಸಫಲವಾಗುವುದೇ ಎಂಬುದು ಮಿಲಿಯನ್‌ ಡಾಲರ್‌ ಪ್ರೆಶ್ನೆ.
- ಬಾಲರಾಜು ಡಿ.ಕೆ