Skip to main content
ಕವನ
ನೋಡು ನೋಡುತಲಿರುವೆ
ಹರಿ ನಿನ್ನ ಸುರವದನ
ನೀ ನನಗೆ ಕೊಟ್ಟ ಕಣ್
ದಣಿವತನಕ
ಕೇಳು ಕೇಳುತಲಿರುವೆ
ಹರಿ ನಿನ್ನ ಸುರಗಾನ
ನೀ ನನಗೆ ಕೊಟ್ಟ ಮನ
ತಣಿವತನಕ
ಆಡು ಆಡಲಿ ನಿನ್ನ
ನೀಳ ಬೆರಳಿನ ಲೀಲೆ
ಕೊಳಲ ಮೇಲೆ
ದೇವ ಲೋಕದ ಗಾನ
ಸುಳಿದು ತೇಲೆ
ಕಾದು ಕಾಯುತಲಿರುವೆ
ನಿನ್ನವಳು ನಾ ಹರಿಯೆ
ನನ್ನನಾಗಿಸು ನಿನ್ನ
ಕೊರಳ ಮಾಲೆ.
-ಮಾಲು
Comments
ಚೆನ್ನಾಗಿದೆ ಸು0ದರ & ಸರಳವಾಗಿದೆ
ಚೆನ್ನಾಗಿದೆ ಸು0ದರ & ಸರಳವಾಗಿದೆ.
In reply to ಚೆನ್ನಾಗಿದೆ ಸು0ದರ & ಸರಳವಾಗಿದೆ by keshavvd
ತುಂಬಾ ಚೆನ್ನಾಗಿದೆ... ಸರಳವಾಗಿ
ತುಂಬಾ ಚೆನ್ನಾಗಿದೆ... ಸರಳವಾಗಿ ನೀವ್ ಬರೆವ ಕವನ ಹಿಡಿಸಿದವು...
ಶುಭವಾಗಲಿ..
ನನ್ನಿ
\|
ಸುಂದರ ಕವನ ....ಸತೀಶ್
ಸುಂದರ ಕವನ
....ಸತೀಶ್
In reply to ಸುಂದರ ಕವನ ....ಸತೀಶ್ by sathishnasa
ನನ್ನ ಕವನಗಳನ್ನು ಓದುವವವರಿಗೂ
ನನ್ನ ಕವನಗಳನ್ನು ಓದುವವವರಿಗೂ ಮತ್ತು
ಮೆಚ್ಚಿ ಪ್ರತಿಕ್ರಿಯಸುವವರಿಗೂ ಧನ್ಯವಾದಗಳು.