ಹರಿ ನಿನ್ನ ಸುರವದನ....

ಹರಿ ನಿನ್ನ ಸುರವದನ....

ಕವನ

 

ನೋಡು ನೋಡುತಲಿರುವೆ
ಹರಿ ನಿನ್ನ ಸುರವದನ
ನೀ ನನಗೆ ಕೊಟ್ಟ ಕಣ್
ದಣಿವತನಕ 
 
ಕೇಳು ಕೇಳುತಲಿರುವೆ 
ಹರಿ ನಿನ್ನ ಸುರಗಾನ
ನೀ ನನಗೆ ಕೊಟ್ಟ ಮನ 
ತಣಿವತನಕ 
 
ಆಡು ಆಡಲಿ ನಿನ್ನ
ನೀಳ ಬೆರಳಿನ ಲೀಲೆ
ಕೊಳಲ ಮೇಲೆ
ದೇವ ಲೋಕದ ಗಾನ
ಸುಳಿದು ತೇಲೆ
 
ಕಾದು ಕಾಯುತಲಿರುವೆ 
ನಿನ್ನವಳು ನಾ ಹರಿಯೆ
ನನ್ನನಾಗಿಸು ನಿನ್ನ
ಕೊರಳ ಮಾಲೆ.
-ಮಾಲು 
 

Comments