ಹರೆದು ಹೋದ ಪರದೆಗಳು!
ಅವಿಶ್ವಾಸವೇ ಜೀವನದ ಬಂಧು.
ಕಣ್ಣಿನ ರೆಪ್ಪೆ ಅಲುಗಾಡಿದಷ್ಟೇ ಹೊತ್ತಿನಲ್ಲಿ ಮುಗಿದು ಹೋಗುತ್ತದೆ ಜೀವನ.
ಅಷ್ಟರಲ್ಲೇ ನಿನ್ನ ಅರ್ಥಮಾಡಿಕೊಳ್ಳಲು ಪ್ರಯತ್ನಮಾಡಿದೆ.
ನೀನು ನನಗೆ ಚೆನ್ನಾಗಿ ಅರ್ಥವಾಗಿದ್ದೀಯೆಂದು ಗೊತ್ತಾದ ಮೇಲೂ ನಿನ್ನ ಕಣ್ಣುಗಳಲ್ಲಿ ಅಪಹಾಸ್ಯವೊಂದು ಅಟ್ಟಹಾಸ ಮಾಡುತ್ತಾಯಿತ್ತು. ಏಕೆ?
ನಿಮುಷಕ್ಕೆ ಒಮ್ಮೆ ಬಣ್ಣ ಬದಲಿಸುವ ಆ ಆಗಸಕ್ಕೆ ತಕ್ಕ ಜೋಡೀ ಈ ಮೋಡ. ಒಮ್ಮೆ ಗರ್ಜನೇ ಮಾಡುತ್ತದೆ. ಮತ್ತೊಮ್ಮೆ ಮೌನವಾಗಿರುತ್ತದೆ.
ಗಾಳಿಗೆ ಚೆದುರಿಹೋಗುವ ಮೋಡಗಳಲ್ಲಿ ನಿನ್ನನ್ನು ನೀನು ನೋಡಿಕೊಂಡು ಹಿಗ್ಗುತ್ತಿ.
ಕೈಗೆ ಸಿಗದ ಹಾಗೇ ಎತ್ತರದಲ್ಲಿ ಇರುವುದು ಸರಿಯೇನೋ ಆಗಲಿ, ಸುಮ್ಮನೇ ಚೆದುರಿಹೋಗುವುದು ಮನುಷ್ಯರಿಗೆ ಸರಿಯಲ್ಲ.
* * * * * * * *
ಒಮ್ಮೆಲೇ ನಂಬಿಕೆ ಹುಟ್ಟಿಕೊಂಡು ಬರುತ್ತದೆ.
ಆ ದಿವಸ, ಮೋಂಬತ್ತಿನ ರೆಕ್ಕೆಗಳುಳ್ಲ ಚಿಟ್ಟೆಯೊಂದು ಹಾರಿ ಹಾರಿ ವಿಹಾರಮಾಡುತ್ತದೆ. ಹೂಗಳಿಗೆ ಹೇಗೆ ಅರಳಬೇಕೋ ಹೋಗಿ ಹೋಗಿ ಪಾಠ ಹೇಳುತ್ತದೆ. ಅರಳದ ಮೊಗ್ಗೆಗಳ ಬೆನ್ನು ತಟ್ಟಿ ಧೈರ್ಯ ಹೇಳುತ್ತದೆ.
ಭ್ರಮವೆನ್ನುವದು ಒಂದು ಹೆಬ್ಬುಲಿ. ನಂಬಿಕೆಯ ಹಿಂದೆನೋ, ಆನಂದದ ಪಕ್ಕದಲ್ಲಿಯೋ ಹೊಂಚು ಹಾಕೇ ಇರುತ್ತದೆ.
ಮಕರಂದ ಸೇವನೆಯಿಂದ ನಶಾ ಹತ್ತಿದ ಮೋಂಬತ್ತಿ ರೆಕ್ಕೆಗಳ ಚಿಟ್ಟೆ ಬೆಂಕಿಯನ್ನು ಕಂಡು ಹೂವೆನ್ನುವ ಭ್ರಮಗೆ ಒಳಗಾಗುತ್ತದೆ. ಬೆಂಕಿಯ ನಾಟ್ಯವು ಆ ಭ್ರಮೆಯನ್ನು ಮತ್ತಿಷ್ಟು ಹೆಚ್ಚು ಮಾಡುತ್ತದೆ.
ಮೋಂಬತ್ತಿ ರೆಕ್ಕೆಗಳ ಸಂಗೀತ. ಚಾಚಿದ ಬೆಂಕೆಯ ನಾಲಿಗೆಯ ನಾಟ್ಯ.
ಒಂದರನ್ನು ಮತ್ತೊಂದು ಎಳೆಯುತ್ತಾ....ಸುಳಿಯುತ್ತಾ....
ಒಂದೇ ಒಂದು ಕ್ಷಣ.
ನಂಬಿಕೆ ಮುರಿಯುವುದಕ್ಕೆ....ಜೀವನ ಮುಗಿಯುವುದಕ್ಕೇ!
ಈ ಎರಡರ ಮಧ್ಯದ ಅಂತರ.....ಒಂದು ಕ್ಷಣ!
* * * * * * * * *
ಜೀವನ ಮತ್ತೆ ಅದೃಷ್ಟ - ಜೂಜು ಆಡುತ್ತಾಯಿವೇ!
ಪಂದ್ಯದಲ್ಲಿ ಮುಡುಪಾದ ಆನಂದವು.
"ರೊಟೀನ್" ಜೀವನಗಳವೆಷ್ಟೋ ಆಸೆಯಿಂದ ಕಾದು ಕುಂತಿವೆ. ಹರಡಿದ ಕಾರ್ಡುಗಳಲ್ಲಿ ಹರಿಯುತ್ತಿರುವ ಲಾಭ ನಷ್ಟಗಳು!
ಜೀವನಕ್ಕೆ ಇರುವಷ್ಟು ಮರುವು ಅದೃಷ್ಟಕ್ಕೆ ಇಲ್ಲ. ಅದು ಒಮ್ಮೆಗೇ ಆಟವನ್ನು ಮುಗಿಸಿಬಿಡುತ್ತದೆ!
* * * * * * * * *
"ಗೋಡೆಗಳುಳ್ಲದ್ದೇ ಮನೆ" ಎನ್ನುವ ಸಿದ್ಧಾಂತ ಹುಟ್ಟಿದಮೇಲೆ "ಎತ್ತರದ ಗೋಡೆಗಳುಳ್ಳದ್ದೇ ಮನ" ಎನ್ನುವ ಮತ್ತೊಂದು ಸಿದ್ಧಾಂತ ಹುಟ್ಟಿಕೊಂಡು ಬಂದಿದೆ.
ಮನದಲ್ಲಿರುವು ಆ ಗೋಡೆಗಳನ್ನು ಇಷ್ಟೊಂದು ಬಣ್ಣಗಲು ಬಳಿದು ಮುಚ್ಚಬೇಕೇ?
* * * * * * * * *
ಈ ಯಂತ್ರಗಳಿಗೆ ತಮ್ಮ ಅಸ್ತಿತ್ವದ ಬಗ್ಗೆ ಪ್ರಜ್ಞಯೇ ಇಲ್ಲ. ಆದರೇನಂತೇ, ಅವು ಬಹಳ ಬೆಲೆಬಾಳುತ್ತವೆ.
ಯಾರ ಜೀವನದಲ್ಲಿ ಈ ಬೆಲೆಬಾಳುವ, ಪ್ರಜ್ಞಾಹೀನ, ಅಸ್ತಿತ್ವ ಶೂನ್ಯ ಯಂತ್ರಗಳು ಹೆಚ್ಚಿಗೇ ಉಂಟೋ ಆ ಜೀವನ ಅಷ್ಟು ದೊಡ್ದದು..
ಇಷ್ಟೇಲ್ಲಾ ಬದುಕು ಬದುಕುವುದು ಆ ಯಂತ್ರಗಳಿಗಾಗಿಯೇ?!?
* * * * * * * *
ಪ್ರಕೃತಿಗೆ ಯಾವ ಪಕ್ಷಪಾತವೂ ಇಲ್ಲ. ಕೆಟ್ಟ ಮನಸು ಮೊದಲಿಗೇ ಇಲ್ಲ.
ಅದರ ಆಶ್ರಯದಲ್ಲಿ - ಒಂದಿಷ್ಟು ಹೂವಿನ ಗಿಡಗಳು. ಒಂದಿಷ್ಟು ಮುಳ್ಳಿನ ಗಿಡಗಳು. ಒಂದಿಷ್ಟು ಒಣಗಿದ ಗಿಡಗಳು.
ಮಾನವ ಜೀವನಕ್ಕೆ ಅಪಾರವಾದ ಸ್ವಾರ್ಥ.
ಒಣಗಿದ ಗಿಡಗಳಿಗೆ ನೀರು ಹೊಯ್ಯದು. ಮುಳ್ಳಿನ ಗಿಡಗಳನ್ನು ಕಡೆದು ಹಾಕುತ್ತದೆ.
ಹೂವಿನ ಗಿಡಗಳಿಗೆ ಮಾತ್ರ ನೀರು ಹಾಕಿ, ಒಂದೊಂದು ಹೂವನ್ನೇ ಕಿತ್ತುತ್ತದೆ.
* * * * * * * *
ಸಮುದ್ರದ ನೀರಿನಿಂದ ಹುಟ್ಟಿತು ಒಂದು ಮೋಡ.
ಮೋಡದಲ್ಲಿ ಮಳೆಯ ನೀರು.
"ಆತ್ಮಾ ವೈ ಪುತ್ರ ನಾಮಾಸಿ"
ಎಲ್ಲೋ ಹುಟ್ಟಿ - ಎಲ್ಲೋ ಬೆಳೆದು - ಎಲ್ಲೋ ಉದುರಿಹೋಗುತ್ತದೆ ಮಳೆ...ಆಕಾಶ ಮಾತೆಯ ಗರ್ಭವನ್ನು ಮಾತ್ರ ಬಿಡಲೊಲ್ಲದು.
ನೆಲದ ಮೇಲೆ ಸಮುದ್ರ ತಂದೆ ಮೇಘವಿರಹದಿಂದ ಬಳಲುತ್ತಾ....ಭೋರ್ಗರೆಯುತ್ತಾ....!!
* * * * * * * * *
Comments
ಉ: ಹರೆದು ಹೋದ ಪರದೆಗಳು!
ಉ: ಹರೆದು ಹೋದ ಪರದೆಗಳು!
ಉ: ಹರೆದು ಹೋದ ಪರದೆಗಳು!
ಉ: ಹರೆದು ಹೋದ ಪರದೆಗಳು!