ಹರೆಯ
ಕವನ
ಮಧುವು ತುಂಬಿದ
ಸಖಿಯ ಕೈಯಲಿ
ಸಖನ ಪ್ರೇಮದ ಓಲೆಯು
ಪ್ರೇಮ ತುಂಬಿದ
ಬಯಕೆ ತೋಟದಿ
ಮೂಡಿ ಬಂದಿದೆ ಪ್ರೀತಿಯು
ಹರೆಯ ಹುಡುಗಿಯ
ಮನದ ಸಂಭ್ರಮ
ಏನ ಹೇಳಲಿ ಅನುದಿನ
ಹೃದಯ ಭಾಷೆಯ
ಸುಖದ ಹೂರಣ
ಸವಿದು ಕುಳಿತಿಹ ಭಾವನ
ಹುಸಿಯ ಕಿರುನಗೆ
ಮೂಡಿ ಮುಖದಲಿ
ಬೆಳಗು ಕಂಡಿದೆ ಯೌವನ
ಹೇಳಲರಿಯದ
ಮನದ ತಲ್ಲಣ
ಪ್ರಿಯನಾಸರೆ ಹೂಮನ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
