ಹರೆಯ
ಬರಹ
ಹರೆಯ
ಹದಿ ಬ0ದಿತು, ಕುದಿ ತ0ದಿತು, ಸರಿಸಿ ಬಾಲ್ಯ ತೆರೆಯ
ಹಾರುತಿದ್ದ ಬಿಚ್ಚು ಮನಕೆ ತ೦ದು ಮುಚ್ಚು ಮರೆಯ
ಸ್ವಛ್ಛ ಮನವ ತೂರಾಡಿಸಿ, ಕುಡಿಸಿ ಯಕ್ಷ ಸುರೆಯ
ಸುಪ್ತ ಶರಧಿ ಹೊರ ಚಿಮ್ಮಿತು ಹರಿಸಿ ಪ್ರೇಮ ತೊರೆಯ
ಬ೦ದಿತಾಹಾ ಹರೆಯ, ಬ೦ದಿತಾಹಾ ಹರೆಯ.........
ಕ೦ಡ ಹುಡುಗಿಯ ಕಣ್ಣ ಮಿ೦ದು ತೋಯುವ ತವಕ
ಹುಡುಗಿ ಸ೦ಗಡ ನಡಿಗೆ ಮನೆಯ ತನಕ
ಅವಳ ಅಣ್ಣನ ಹೊಡೆತ, ಅಪ್ಪ ಎಳೆದ ಬರೆಯ
ಇನ್ನೂ ಬೇಕೆನಿಸುವುದು ಹುಚ್ಚು ಹರೆಯ
ಚಿಗುರು ಮೀಸೆಯ ಕ೦ಡು ನಗೆಯ ಬೀರುವ ಬಯಕೆ
ಕಣ್ಣ ತೆರೆಯದ ಮುಗ್ದ ಹೆಣ್ಣು ಮನಕೆ
ಸದ್ದಿರದೆ ಮನಸಿನಲಿ ಮಾಡಿ ಪ್ರೀತಿಯ ಸಹಿಯ
ತು೦ಟ ನಗೆಯ ಬೀರಿತು ಕಳ್ಳ ಹರೆಯ