ಹರ್ಷ ತಂದ ಪಲ್ಲವಿ

ಹರ್ಷ ತಂದ ಪಲ್ಲವಿ

ಕವನ

ಜಗವು ತೆರೆದ ಹೃದಯ ಮೇನೆ

ಬಂಧವಿರದ ಬಂಧುರ

ನಗುವ ಸೂಸಿ ಸೃಷ್ಠಿ ಸೊಬಗು

ಅಂದವಿರುವ ಸುಂದರ||

 

ಪ್ರೇಮ ಗಾನ ಹಾಡಿ ಮನವ

ಹೊಕ್ಕಿ ನಲಿದು ಮೋದದಿ

ಸೋಮ ಚೆಲುವು ಬಾನ ತುಂಬ

ನಕ್ಕಿ ಕರೆದು ಮೋಹದಿ||

 

ಜಗದ ಸೃಷ್ಠಿ ನಯನ ತುಂಬಿ

ಹರ್ಷ ತಂದ ಪಲ್ಲವಿ

ಮೊಗದ ಒಲವ ರಾಶಿ ಹೆಚ್ಚಿ

ವರ್ಷ ಬಂದು ಅನುಭವಿ||

 

ಭುವಿಯ ಅರ್ತಿ ಕಣ್ಣ ಕುಕ್ಕಿ

ಹೃದಯ ಸೂರೆ ಮಾಡಿದೆ

ಕವಿಯ ಮನದಿ ಮೂಡಿ ಬಂದ

ಸುಧೆಯು ತನನ ಹಾಡಿದೆ||

 

ಬೆಟ್ಟ ಗುಡ್ಡ ನದಿ ಝರಿ

ಹಸಿರ ಸಿರಿಯ ಪಲ್ಲವ

ಗಟ್ಟಿ ಮೇಳ ಕೇಳಿ ಬರುತ

ಕಸುವು ಬರುವ ಸಂಭವ|

 

ಬಾನು ಭುವಿಯು ವಾಯು ಅಗ್ನಿ

ಜಲವು ಜಗದಿ ಮೆರೆದಿವೆ

ಜೀವಭಾವದುಸಿರ ಹಸಿರು

ಕಲೆಯ ನಗುವ ತಂದಿವೆ||

 

-*ಅಭಿಜ್ಞಾ ಪಿ ಎಮ್ ಗೌಡ*

 

ಚಿತ್ರ್