ಹಲವು ಜನುಮದ ನೆಂಟು...

ಹಲವು ಜನುಮದ ನೆಂಟು...

ಕವನ

 

ನಿನ್ನ ಈ ಚೆಲುವಲ್ಲ 
ನಿನ್ನೆದೆಯ ಒಲವಲ್ಲ 
ಚೆನ್ನ, ನಿನ್ನೆಡೆಗೆ 
ನನ್ನ ಸೆಳೆದಿರುವುದು!
ನಮ್ಮಿಬ್ಬರೊಳು  ಉಂಟು 
ಹಲವು ಜನುಮದ ನೆಂಟು 
ಇದುವೆ ನಿನ್ನೊಳು ನನ್ನ 
ಸೆರೆ ಹಿಡಿದಿರುವುದು!
-ಮಾಲು