ಹಲಸಿನಕಾಯಿಯ ಮೆಂತೆ ಗರಂ ಗಸಿ

ಹಲಸಿನಕಾಯಿಯ ಮೆಂತೆ ಗರಂ ಗಸಿ

ಬೇಕಿರುವ ಸಾಮಗ್ರಿ

ಹಲಸಿನಕಾಯಿ ಸೊಳೆ ೪ ಕಪ್, ಹಸಿಮೆಣಸಿನ ಕಾಯಿ ೪, ನೀರುಳ್ಳಿ ೧, ರುಚಿಗೆ ಉಪ್ಪು, ಸ್ವಲ್ಪ ಬೆಲ್ಲ, ತೆಂಗಿನ ಕಾಯಿ ತುರಿ ೧ ಕಪ್, ಹುಣಸೇ ಹಣ್ಣು ಸ್ವಲ್ಪ, ಒಣ ಮೆಣಸು ೮, ಮೆಂತೆ ಕಾಲು ಚಮಚ, ಉದ್ದಿನ ಬೇಳೆ ೧ ಚಮಚ, ಜೀರಿಗೆ ಕಾಲು ಚಮಚ, ತೊಗರಿ ಬೇಳೆ ೨ ಚಮಚ, ಕರಿಬೇವು ಸೊಪ್ಪು, ಸಣ್ಣ ತುಂಡು ಚಕ್ಕೆ, ಲವಂಗ ೨, ಶುಂಠಿ ಹುಡಿ ಸ್ವಲ್ಪ, ಇಂಗಿನ ಹುಡಿ ಸ್ವಲ್ಪ, ಕಡಲೆ ಕಾಳು ೧ ಕಪ್ (ಯಾವ ಕಾಳನ್ನು ಬೇಕಾದರೂ ಬಳಸಿಕೊಳ್ಳಬಹುದು), ಬೆಳ್ಳುಳ್ಳಿ  ಒಗ್ಗರಣೆಗೆ, ಗರಂ ಮಸಾಲೆ ಹುಡಿ

ತಯಾರಿಸುವ ವಿಧಾನ

ತುಂಡು ಮಾಡಿದ ಹಲಸಿನಕಾಯಿ ಸೊಳೆಯನ್ನು ಉಪ್ಪು, ಸ್ವಲ್ಪ ಬೆಲ್ಲ, ಹಸಿಮೆಣಸಿನಕಾಯಿ, ನೀರುಳ್ಳಿ ಹಾಕಿ ಬೇಯಿಸಿಕೊಳ್ಳಬೇಕು. ತೆಂಗಿನಕಾಯಿತುರಿ, ಚಿಟಿಕೆ ಹುಣಿಸೆ ಹಣ್ಣು ಸೇರಿಸಬೇಕು. ಒಣಮೆಣಸು, ಮೆಂತೆ, ಉದ್ದಿನಬೇಳೆ, ಜೀರಿಗೆ, ತೊಗರಿಬೇಳೆ, ಕರಿಬೇವು ಎಲೆ, ಸಣ್ಣ ತುಂಡು ಚೆಕ್ಕೆ, ಲವಂಗ, ಚಿಟಿಕೆ ಶುಂಠಿ ಪೌಡರ್, ಇಂಗಿನ ಹುಡಿ ಹಾಕಿ ಫ್ರ್ಯೆ ಮಾಡಿ, ನಯವಾಗಿ ರುಬ್ಬಬೇಕು. ಕಡಲೆ ಕಾಳು ಬೇಯಿಸಿ ‌ಸೇರಿಸಿ, ರುಬ್ಬಿದ ಮಿಶ್ರಣ ಸೇರಿಸಿ ಮಿಶ್ರ ಮಾಡಿ, ಸಣ್ಣ ಉರಿಯಲ್ಲಿ ಕುದಿಸಿ ಕೆಳಗಿಳಿಸಿ, ಬೆಳ್ಳುಳ್ಳಿ ಒಗ್ಗರಣೆ ಕೊಡಬೇಕು.(ತುಂಬಾ ಖಾರ ಬೇಕಾದವರು ಗರಂ ಮಸಾಲೆ ಹುಡಿ ಹಾಕಬಹುದು). ಹತ್ತು ನಿಮಿಷ ಮುಚ್ಚಿಟ್ಟು ನಂತರ ಬಳಸಬಹುದು. ಊಟ, ದೋಸೆ, ಚಪಾತಿ, ಪರೋಟ, ಪೂರಿ ಜೊತೆ ತಿನ್ನಲು ಬಹಳ ರುಚಿ.

-ರತ್ನಾ ಭಟ್ ತಲಂಜೇರಿ