ಹಲಸಿನ ಬೀಜದ ಮಸಾಲೆ ಸಾರು

ಹಲಸಿನ ಬೀಜದ ಮಸಾಲೆ ಸಾರು

ಬೇಕಿರುವ ಸಾಮಗ್ರಿ

ಹಲಸಿನ ಬೀಜಗಳು ೧೦, ಬ್ಯಾಡಗಿ ಮೆಣಸು ೪, ಅರಸಿನ ಹುಡಿ ಸ್ವಲ್ಪ, ಇಂಗು, ಜೀರಿಗೆ ಕಾಲು ಚಮಚ, ಕೊತ್ತಂಬರಿ ೧ ಚಮಚ, ಮೆಂತೆ ಕಾಳು ೪, ಕಾಳುಮೆಣಸು ೧೦, ಕಾಯಿಮೆಣಸು ೧-೨ ಹುಣಸೇ ಹಣ್ಣು ಸ್ವಲ್ಪ, ರುಚಿಗೆ ಉಪ್ಪು, ಬೆಲ್ಲ, ಒಗ್ಗರಣೆಗೆ ಬೆಳ್ಳುಳ್ಳಿ ಮತ್ತು ಕರಿಬೇವು ಸೊಪ್ಪು.

 

ತಯಾರಿಸುವ ವಿಧಾನ

ಹಲಸಿನ ಬೀಜಗಳನ್ನು ಕುಕ್ಕರ್ ನಲ್ಲಿ ಮೂರು ವಿಸಿಲ್ ಹಾಕಿಸಿ ಕೆಳಗಿಳಿಸಬೇಕು. ಆರಿದ ಮೇಲೆ ಮೇಲಿನ ಮತ್ತು ಒಳಗಿನ ಸಿಪ್ಪೆ ತೆಗೆದು ಕಿವುಚಿಡಿ. ಒಣಮೆಣಸು(ಬ್ಯಾಡಗಿ), ಚಿಟಿಕೆ ಅರಸಿನಹುಡಿ, ಇಂಗು, ಜೀರಿಗೆ, ಕೊತ್ತಂಬರಿ, ಮೆಂತೆ ಕಾಳು, ಕಾಳುಮೆಣಸು, ಸ್ವಲ್ಪ ಹುಣಿಸೇಹಣ್ಣು ಎಲ್ಲಾ ಹುರಿದು ಮಿಕ್ಷಿಯಲ್ಲಿ ಹುಡಿ ಮಾಡಿ, ಕಿವುಚಿಟ್ಟ ಹಲಸಿನ ಬೀಜಕ್ಕೆ ಸೇರಿಸಿ, ಕಾಯಿಮೆಣಸು ಹಾಕಿ. ನೀರು ಬೇಕಾದಷ್ಟು ಸೇರಿಸಿ. ಉಪ್ಪು, ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ ಕುದಿಸಿ, ಬೆಳ್ಳುಳ್ಳಿ ಒಗ್ಗರಣೆ ಕೊಡಬೇಕು. ಕರಿಬೇವು ಸೊಪ್ಪು ಹಾಕಿ ಮುಚ್ಚಿ, ಹತ್ತು ನಿಮಿಷ ಕಳೆದು ಉಪಯೋಗಿಸಬಹುದು. ಹಲಸಿನ ಬೀಜ ಸಿಹಿ ಇರುವ ಕಾರಣ ಬೆಲ್ಲ ಸ್ವಲ್ಪ ಸಾಕು. ತುಂಬಾ ರುಚಿಯಾದ ಸಾರು ಇದಾಗಿದೆ.

-ರತ್ನಾ ಕೆ.ಭಟ್, ತಲಂಜೇರಿ