ಹಲಸಿನ ಹಣ್ಣಿನ ದೋಸೆ

ಹಲಸಿನ ಹಣ್ಣಿನ ದೋಸೆ

ಬೇಕಿರುವ ಸಾಮಗ್ರಿ

ಹಣ್ಣಾದ ಹಲಸಿನ ತೊಳೆ 2ಕಪ್ (ಅಕ್ಕಿಯನ್ನು ಅವಂಬಿಸಿ), ಉಪ್ಪು, ಅಕ್ಕಿ, ಎಣ್ಣೆ, ತುಪ್ಪ, ಜೀರಿಗೆ, ಕರಿಮೆಣಸು(ಪೆಪ್ಪರ್).

ತಯಾರಿಸುವ ವಿಧಾನ

ಹಣ್ಣಾದ ಹಲಸಿನ ತೊಳೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ನೆನೆಸಿಟ್ಟ ಅಕ್ಕಿಯೊಂದಿಗೆ ಸೇರಿಸಿ, ಉಪ್ಪು, ಜೀರಿಗೆ, ಕಾಳುಮೆಣಸು ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಬೇಕು. ಹಲಸಿನ ದೋಸೆ ಸಿಹಿಯಾಗುವುದರಿಂದ ತುಂಬಾ ಸಿಹಿ ಆಗದವರು, ಮಿಕ್ಸಿಗೆ ಹಾಕಿ ರುಬ್ಬುವ ಮಿಶ್ರಣಕ್ಕೆ ಎರಡು ಮೆಣಸು ಹಾಕಿಕೊಳ್ಳಬಹುದು. ರುಬ್ಬಿದ ಮಿಶ್ರಣವನ್ನು ಇಡ್ಲಿಯ ಹಿಟ್ಟಿನ ಹದ ಬರುವಂತೆ ನೀರು ಹಾಕಿ ಕಲಸಿ. ಹೆಚ್ಚು ನೀರಾಗಬಾರದು. ನಂತರ ದೋಸೆ ಕಾವಲಿಯನ್ನು ಇಟ್ಟು ಹದವಾದ ಉರಿಯಲ್ಲಿ ಕಾವಲಿಯನ್ನು ಕಾಯಿಸಿ, ಎಣ್ಣೆಯನ್ನು ಹಚ್ಚಬೇಕು. ಕಾವಲಿ ಕಾದ ನಂತರ ಹಿಟ್ಟಿನಿಂದ ದೋಸೆಯನ್ನು ಹುಯ್ಯಿರಿ. ಈ ದೋಸೆ ದಪ್ಪ ದೋಸೆಯಾಗಿರುತ್ತದೆ ಹಾಗಾಗಿ ಎರಡೂ ಬದಿಯನ್ನು ಚೆನ್ನಾಗಿ ಕಾಯಿಸಿ. (ಉರಿ ಸಣ್ಣದಾಗಿರಲಿ, ಹಲಸಿನ ಹಿಟ್ಟು ಉರಿ ಹೆಚ್ಚಾದರೆ ಕರಚಿ ಹೋಗುವುದು ಬೇಗ.) ಕಾದ ದೋಸೆಯನ್ನು ಪ್ಲೇಟಿಗೆ ಹಾಕಿ. ಈ ದೋಸೆಯನ್ನು ಬಿಸಿ ಬಿಸಿಯಾಗಿ ತುಪ್ಪದ ಜತೆಗೆ ತಿನ್ನಲು ಬಲು ರುಚಿ ಹಾಗೂ ದೋಸೆ ಘಮ ಘಮ ಸುವಾಸನೆ. ಸಿಹಿ ಇಷ್ಟಪಡದವರು ಹಸಿರು ಮೆಣಸಿನ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ತಿನ್ನಬೇಕು. ಸಕತ್ ರುಚಿಯಾಗಿರುತ್ತದೆ.

Comments