*ಹಲಸಿನ ಹಣ್ಣು*( ಕುಸುಮ ಷಟ್ಪದಿ)

*ಹಲಸಿನ ಹಣ್ಣು*( ಕುಸುಮ ಷಟ್ಪದಿ)

ಕವನ

ಮುಪ್ಪನ್ನು ಮೂಂದೂಡಿ

ನೆಪ್ಪಿಡುವ ಬುದ್ದಿಯನು

ತಪ್ಪಿಲದೆ ಕೊಡುತಿರಲು ಹಲಸಿನಣ್ಣು

ದಪ್ಪಾಗಿ ಗಿಡದಲ್ಲಿ

ಸಿಪ್ಪೆಯದು ಬಾಯಲ್ಲಿ

ಹಪ್ಪಳದ ರೂಪದಲಿ ಮೆರೆಯುತ್ತಿದೆ

 

ಭಾರವದು ಹಲಸಿಂದು

ತೋರುತಿದೆ ಸಿಹಿಗುಣವ

ಮಾರಾಟದಲಿ ವಿತ್ತವನು ರೈತಗೆ

ತಾರುಣ್ಯವನ್ನು ತಾ

ಸಾರುತಲಿ ತಂದಿಹುದು

ನಾರಿಯರ ವದನ ಕಾಂತಿಯೊಳು ತಾನು

 

ಹಪ್ಪಳದ ರುಚಿಯಿಂದು

ಸಪ್ಪಳವ ಮಾಡದೆಯೆ

ಗಪ್ಪನೆಯೆ ತಿಂದಿಹೆವು ಸಂತಸದಲಿ

ಕಪ್ಪಾಗಿ ಕಂಡಿರಲು

ತುಪ್ಪ ಹಚ್ಚುತಲದಕೆ

ತೆಪ್ಪದಾಕಾರದೊಳ್ ಹಪ್ಪಳವನು

 

ಬಡವರಾ ಹಣ್ಣಾಗಿ

ಕಡೆತನಕ ಮುಳ್ಳಿನಲಿ

ತುಡುಗನ್ನು ಮಾಡದಿರೆ ಬರುವದಿಲ್ಲ

ಚಡಪಡಿಸಿ ಮನವಿಂದು

ಜಡವಿರುವ ಕಾಯಕ್ಕೆ

ಹುಡುಗತನ ತಂದಿರಲು ಹಲಸು ಹಣ್ಣು

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್