ಹಲಸು ಕಲಿಸುತಿದೆ

ಹಲಸು ಕಲಿಸುತಿದೆ

ಕವನ

 

  ಹಲಸು ಕಲಿಸುತಿದೆ 
ಭಾರವ ಹೊತ್ತು ಬಾಗಿದೆ ಕತ್ತು
ದಾರಿಗ ಬಾ ಎನ್ನುತಿದೆ ಮತ್ತೂ
ಕರೆದಿಲ್ಲೆನ್ನನು ಅದು ಬೇಸತ್ತು
ಮರೆಯದು ಕರ್ತವ್ಯವ ಕಿಂಚಿತ್ತು
ಭಾವದೊಳಿಲ್ಲ ಹಮ್ಮಿನ ಬೆಸುಗೆ
ಜೀವನ ಮೀಸಲು ಸದಾ ಪರರಿಗೆ
ನೋವಿನ ಬೇವ ಸಹಿಸುವುದೆಲ್ಲ
ಈವುದು ಸುಖ ಬೆಲ್ಲವ ಜನಕೆಲ್ಲ
ಅತ್ತಿತೆ ಕರೆದಿತೆ ಅಯ್ಯೋ ಏಂದಿತೆ
ನಿಟ್ಟುಸಿರಿಟ್ಟಿತೆ ಕಣ್ಣೀರಿಳಿಸಿತೆ
ಗುಟ್ಟಿನೊಳಿಟ್ಟಿದೆ ಭಾರದ ನೋವ
ತೊಟ್ಟಿದೆ ಹೃದಯದಿ ಅಮೃತದ ಭಾವ
ಹೊರಗಡೆ ಮುಳ್ಳಿದೆ ಧೃತಿಗೆಡಬೇಡ
ಕೊರೆಯಲು ಅಂಟಿದೆ ಮತಿಗೆಡಬೇಡ
ಒಳಗಡೆ ಸವಿಯನು ನೀ ರುಚಿನೋಡಾ
ಬಳಲಿದ ಪಥಿಕನೆ ಕಂಗೆಡಬೇಡ
ಸವಿಯುವ ಮುನ್ನ ಯೋಚಿಸು ಚಿನ್ನ
ನವಿರೇ ಅಂತೆಯೆ ಹೃದಯವು ನಿನ್ನ
ಕವಿದಿರೆ ನಿರ್ದಯ ತಿರುಗಿಸು ಬೆನ್ನ
ಸವಿಯಲು ಸಲ್ಲ ಆ ರುಚಿ ಹಣ್ಣ
              ಹರಿದಾಸ ನೀವಣೆ ಗಣೇಶಭಟ್ಟ
              ಕೋಡೂರು

 

                                                       ಹಲಸು ಕಲಿಸುತಿದೆ


ಭಾರವ ಹೊತ್ತು ಬಾಗಿದೆ ಕತ್ತು

ದಾರಿಗ ಬಾ ಎನ್ನುತಿದೆ ಮತ್ತೂ

ಕರೆದಿಲ್ಲೆನ್ನನು ಅದು ಬೇಸತ್ತು

ಮರೆಯದು ಕರ್ತವ್ಯವ ಕಿಂಚಿತ್ತು

 


ಭಾವದೊಳಿಲ್ಲ ಹಮ್ಮಿನ ಬೆಸುಗೆ

ಜೀವನ ಮೀಸಲು ಸದಾ ಪರರಿಗೆ

ನೋವಿನ ಬೇವ ಸಹಿಸುವುದೆಲ್ಲ

ಈವುದು ಸುಖ ಬೆಲ್ಲವ ಜನಕೆಲ್ಲ


ಅತ್ತಿತೆ ಕರೆದಿತೆ ಅಯ್ಯೋ ಏಂದಿತೆ

ನಿಟ್ಟುಸಿರಿಟ್ಟಿತೆ ಕಣ್ಣೀರಿಳಿಸಿತೆ

ಗುಟ್ಟಿನೊಳಿಟ್ಟಿದೆ ಭಾರದ ನೋವ

      ತೊಟ್ಟಿದೆ ಹೃದಯದಿ ಅಮೃತದ ಭಾವ


 ಹೊರಗಡೆ ಮುಳ್ಳಿದೆ ಧೃತಿಗೆಡಬೇಡ

 ಕೊರೆಯಲು ಅಂಟಿದೆ ಮತಿಗೆಡಬೇಡ

    ಒಳಗಡೆ ಸವಿಯನು ನೀ ರುಚಿನೋಡಾ

ಬಳಲಿದ ಪಥಿಕನೆ ಕಂಗೆಡಬೇಡ


ಸವಿಯುವ ಮುನ್ನ ಯೋಚಿಸು ಚಿನ್ನ

ನವಿರೇ ಅಂತೆಯೆ ಹೃದಯವು ನಿನ್ನ

ಕವಿದಿರೆ ನಿರ್ದಯ ತಿರುಗಿಸು ಬೆನ್ನ

ಸವಿಯಲು ಸಲ್ಲ ಆ ರುಚಿ ಹಣ್ಣ

                                  ಹರಿದಾಸ ನೀವಣೆ ಗಣೇಶಭಟ್ಟ              

              ಕೋಡೂರು

Comments