ಹಲಸು ಪಲ್ಯ

ಹಲಸು ಪಲ್ಯ

ಬೇಕಿರುವ ಸಾಮಗ್ರಿ

ತುಂಡರಿಸಿದ ಹಲಸಿನಕಾಯಿ ಹೋಳುಗಳು ೪ ಕಪ್, ಮೆಣಸಿನ ಹುಡಿ ೨ ಚಮಚ, ತೆಂಗಿನಕಾಯಿ ತುರಿ ಕಾಲು ಕಪ್, ಕೊಬ್ಬರಿ ಎಣ್ಣೆ ೨ ಚಮಚ, ಕರಿಬೇವು ಸೊಪ್ಪು.

 

ತಯಾರಿಸುವ ವಿಧಾನ

ತುಂಡು ಮಾಡಿದ ಹಲಸಿನಕಾಯಿ ಹೋಳುಗಳಿಗೆ ಉಪ್ಪು ಮತ್ತು ಮೆಣಸಿನ ಹುಡಿ ಹಾಕಿ ಬೇಯಿಸಿ. ಹದ ಬೆಂದಾಗ ಒಗ್ಗರಣೆ ಗರಂ ಆಗಿ ಕೊಡಿ. ತೆಂಗಿನಕಾಯಿ ತುರಿ ಹಾಕಿ, ಕೊಬ್ಬರಿ ಎಣ್ಣೆ, ಸ್ವಲ್ಪ ಕರಿಬೇವು ಸೊಪ್ಪು ಹಾಕಿ ಮುಚ್ಚಿಡಿ. ಎಲ್ಲಾ ಚೆನ್ನಾಗಿ ಮಿಶ್ರ ಮಾಡಿ ಕೆಳಗಿಳಿಸಿ. ಬಿಸಿಬಿಸಿ ಪಲ್ಯ ತುಂಬಾ ರುಚಿ.

-ರತ್ನಾ ಕೆ.ಭಟ್, ತಲಂಜೇರಿ