ಹಳದಿ ತಿರುಳಿನ ಕಲ್ಲಂಗಡಿ

ಹಳದಿ ತಿರುಳಿನ ಕಲ್ಲಂಗಡಿ

ಮೊದಲೆಲ್ಲಾ ನಮ್ಮಲ್ಲಿ ಒಂದು ಕಲ್ಪನೆಯಿತ್ತು. ಕಲ್ಲಂಗಡಿ ಎಂದರೆ ಹೊರಗಡೆ ಹಸಿರು ಒಳ ತಿರುಳು ಕೆಂಪು ಎಂದು. ಆದರೆ ಇಂದಿನ ವಿಚಿತ್ರಯುಗದಲ್ಲಿ ಎಲ್ಲವೂ ಉಲ್ಟಾ ಪುಲ್ಟಾ ಆಗಿದೆ. ಕೆಲವು ವರ್ಷಗಳ ಹಿಂದೆ ನಾನು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಆಗ ಹಳದಿ ತಿರುಳಿನ ಕಲ್ಲಂಗಡಿ ಎಂಬ ನಾಮ ಫಲಕ ನೋಡಿ ಆಶ್ಚರ್ಯ ಪಟ್ಟುಕೊಂಡು ದುಬಾರಿ ದರ ತೆತ್ತು ಕಲ್ಲಂಗಡಿಯನ್ನು ಮನೆಗೆ ತೆಗೆದು ಕೊಂಡು ಬಂದೆ. ಹೊರಗಿನಿಂದ ಸಾಮಾನ್ಯ ಕಲ್ಲಂಗಡಿಯಂತೆಯೇ ಕಂಡರೂ ಹಸಿರು ಗೆರೆಗಳು ಸ್ವಲ್ಪ ಗಾಢವಾದ ಬಣ್ಣದಲ್ಲಿವೆ. ಆದರೆ ಕತ್ತರಿಸಿನೋಡಿದಾಗ ಒಳಗಡೆಯ ತಿರುಳು ಹಳದಿ. ರುಚಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ ಕೆಂಪು ಕಲ್ಲಂಗಡಿಯ ರೀತಿಯೇ ಇತ್ತು. ಯಾಕೆ ಹೀಗಾಯ್ತು?

ಇದು ನೈಸರ್ಗಿಕವಾಗಿ ಪರಿವರ್ತನೆಯಾದ (Natural Mutation) ಕಲ್ಲಂಗಡಿಯ ವಿಧ. ವಿಶ್ವದಲ್ಲಿ ಹೀಗೆ ಗಮನಿಸಲು ಹೋದರೆ ಸುಮಾರು ೧೨೦೦ ವಿಧದ ಕಲ್ಲಂಗಡಿ ತಳಿಗಳಿವೆ. ಇತ್ತೀಚೆಗೆ ಕಿರಣ ತಳಿಯ ಕಲ್ಲಂಗಡಿಯಲ್ಲೂ ಹಳದಿ ಕಲ್ಲಂಗಡಿ ಬರ ತೊಡಗಿದೆ. ಇದರಲ್ಲಾದರೆ ಹೊರಗಿನ ಮೈ ಸಹಾ ಹಳದಿ ಇದೆ. ಆದರೆ ರುಚಿಯಲ್ಲಿ ವ್ಯತ್ಯಾಸವಿಲ್ಲ. ನಿಮಗೆ ಅದೃಷ್ಟವಿದ್ದರೆ ನಿಮ್ಮ ಕಣ್ಣಿಗೂ ಈ ಹಳದಿ ಕಲ್ಲಂಗಡಿ ಕಂಡು ಬಂದರೆ ಖರೀದಿಸಿ ನೋಡಿ.