ಹಳಸಿದ ರಾಜಕಾರಣ

ಹಳಸಿದ ರಾಜಕಾರಣ

ಕವನ

ನಮ್ಮ ನಾಡಿನ ರಾಜಕಾರಣ
ಆಗಿದೆ ಹಳಸಿದ ಹೂರಣ
ದಿನವೂ ಕಚ್ಚಾಡುತ್ತಾರೆ ವಿನಾಕರಣ
ಮಾಡುತ ದಿನಕ್ಕೊಂದು ಹಗರಣ
ಮರೆತು ನಾಡಿನ ಜನತೆಯ ಸಂಪೂರ್ಣ

 ನಮ್ಮ ನಾಡಿನ ಕೇಂದ್ರ ಬಿಂದು ನಮ್ಮ ವಿಧಾನಸೌಧ
ರಾಜಕಾರಣಿಗಳು ಆಡುವ ಆಟ ಇಲ್ಲಿ ವಿಧ ವಿಧ
ಕುರ್ಚಿಗಾಗಿ ಏನು ಮಾಡಲು ಇವರು ಸಿದ್ದ
ಹಣ, ಭೂಮಿಗಾಗಿ ನಾಡನ್ನು ಮಾರಾಟಕೂ ಇವರೂ ಭದ್ಧ.

ಪ್ರಾವಾಹ ಬರಲಿ, ಪ್ರಕ್ರ್ರತಿ ವಿಕೋಪವೇ ಆಗಲಿ ಇವರಿಗಿಲ್ಲ ಚಿಂತೆ
ರೇಸಾರ್ಟ್‌ಗಳಲ್ಲಿ ಮಜಾವಾಗಿ ಕಾಲ ಕಳೆಯುವ ಮಹಾನ್ ಜನತೆ
ಮನುಷ್ಯತ್ವ ಇಲ್ಲದ ಮಾನವ ರೂಪದಲ್ಲಿ ಕಾಣುವರು ಪ್ರಾಣಿಗಳಂತೆ
ಇಂಥವರ ನಾಯಕರನ್ನಾಗಿ ಆರಿಸಿದ್ದ್ದಕ್ಕೆ ಪಡಬೇಕಾಗಿದೆ ಪಶ್ಚಾತಾಪ ನಮ್ಮ ಜನತೆ.