ಹಳೆಯ ಪ್ರಸಂಗವೊಂದರ, ನೆನಪು.. !

ಹಳೆಯ ಪ್ರಸಂಗವೊಂದರ, ನೆನಪು.. !

ಬರಹ

ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳಿಬ್ಬರೂ ದೊಡ್ಡವರಾಗಿ ಬೆಳೆದು ರೆಕ್ಕೆ ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್ ನಲ್ಲಿದ್ದೇವೆ. ಆದರೂ, ನಾವು ಬೊಂಬಾಯಿನ ’ಶಿವಾಜಿ ಪಾರ್ಕ್’ ನಲ್ಲಿ ಕಳೆದ ೧೦ ವರ್ಷಗಳು ನಿಜಕ್ಕೂ ಅವಿಸ್ಮರಣನೀಯ ! ಏಕೆಂದರೆ ನಮ್ಮ ಇಬ್ಬರು ಮಕ್ಕಳ, ಮೊದಲ ಪ್ರಾಥಶಾಲೆಯ ’ವಿದ್ಯಾಭ್ಯಾಸದ-ವಿಧಿ' ಇಲ್ಲಿ ನಡೆಯಿತು . ೨-೩ ಕನ್ನಡ ಪರಿವಾರಗಳು, ನಮ್ಮ ಸಹವರ್ತಿಗಳು ನಮ್ಮೊಡನೆ ವಾಸವಾಗಿದ್ದರು. ಮೇಲಾಗಿ ’ಕರ್ನಾಟಕಸಂಘ’ ನಮಗೆ ಅತಿ ಸಮೀಪ. ಎಲ್ಲಾ ಸಾಂಸ್ಕೃತಿಕ-ಕಾರ್ಯಕ್ರಮಗಳಿಗೂ ಬಿಡದೆ ಹೋಗುತ್ತಿದ್ದೆವು. ಆಗ ವ್ಯಾಸರಾವ್ ಬಲ್ಲಾಳ್, ಶ್ರೀಪತಿ ಬಲ್ಲಾಳ್, ಅವರ ಪತ್ನಿ, ಕಿಶೋರಿ ಬಲ್ಲಾಳ್, ವರದರಾಜ್ ಆದ್ಯ, ಅವರ ಪತ್ನಿ, ಮತ್ತು ಸನದಿಯವರ ಭಾಷಣಗಳನ್ನು ಕೇಳುತ್ತಿದ್ದೆವು. ಎಮ್.ವಿ. ಕಾಮತ್, ಜಯದೇವ ಹಟ್ಟಂಗಡಿ, ಗಿರೀಶ್ ಕಾರ್ನಾಡ್, ವಿಶೇಷ ಅತಿಥಿಗಳಾಗಿ, ಆಗಾಗ ಬರುತ್ತಿದ್ದರು. ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಲು, ಆಗ ನಮಗೇನೊ ಖುಷಿ !

ಮುಂದೆ ಓದಿ....

http://sampada.net/article/2452