ಹಳೆಯ ಮರವೂ.. ಆಧುನಿಕ ರಸ್ತೆಯೂ..

ಹಳೆಯ ಮರವೂ.. ಆಧುನಿಕ ರಸ್ತೆಯೂ..

Comments

ಬರಹ

ಒಂದೂರು. ಆ ಊರಿನ ಮಧ್ಯದಲ್ಲೊಂದು ಹಳೆಯದಾದ ಒಂದು ಮರ ಇತ್ತು.. ಆ ಮರವು ದಾರಿಹೋಕರಿಗೆ ನೆರಳನ್ನೂ, ಸಿಹಿಯಾದ ಹಣ್ಣುಗಳನ್ನೂ ನೀಡುತ್ತಿತ್ತು.
ಆ ಊರಲ್ಲೊಬ್ಬ ಮುದುಕ ಇದ್ದ. ಪಕ್ಕದೂರಿನ ಮರಗಳಿಗೆ ಬಂದ ಕಾಯಿಲೆಗಳಿಗೆಲ್ಲ ಈ ಮರದಿಂದ ಬೀಸುತ್ತಿರುವ ಗಾಳಿಯೆ ಕಾರಣ ಎಂದು ಊರವರಿಗೆ ಭಾಶಣ ಬಿಗಿಯುತ್ತಿದ್ದ ತತ್ವ ಜ್ಞಾನಿ. ಆ ಊರಿನಲ್ಲಿ ಅದೆ ಮರದ ನೆರಳಿನಲ್ಲಿ ಕಾಲ ಕಳೆದು ಅದರ ಹಣ್ಣುಗಳನ್ನು ತಿಂದು ಅದೆ ಮರಕ್ಕೆ ಉಚ್ಚೆ ಹೊಯ್ಯುತ್ತಿದ ಒಬ್ಬ ಹುಚ್ಚನೊಬ್ಬನಿದ್ದ. ಈ ಮಹಾಶಯರ ಬಗ್ಗೆ ಇನ್ನೊಮ್ಮೆ ತಿಳಿಸುವೆ.
ಈ ಕಥೆಯ ಕಥಾ ನಾಯಕರಾಗಿರುವ ಇಬ್ಬರು ಬುದ್ದಿವಂತರು ಒಮ್ಮೆಗೇ ಜಾಸ್ತಿ ಹಣ್ಣುಗಳನ್ನು ತಿನ್ನಲೋಸುಗ ಅತಿ ಬುದ್ಧಿವಂತಿಕೆಯನ್ನು ಬಳಸಿ ಅದೇ ಮರಕ್ಕೆ ಕಲ್ಲು ಹೊಡೆದು ಹಣ್ಣು ಉದುರಿಸತೊಡಗಿದರು. ಹುಳಿ ಹುಳಿಯಾದ ಕಾಯಿಗಳನ್ನು ತಿಂದು ಮರದ ಮೇಲೆ ಬೇಸರಿಸಿಕೊಂಡ ಹುಡುಗರಿಗೆ ಮುದುಕ ಮತ್ತು ಹುಚ್ಚ ಸೆರಿಕೊಂಡು, ಈ ಮರದಲ್ಲಿ ಭೂತ ಸೆರಿಕೊಂಡಿದೆಯೆಂದು ನಂಬಿಸಿದರು.
ಅದೇ ಸಮಯಕ್ಕೆ ಸರಿಯಾಗಿ ಆ ಊರಿಗೊಂದು ರಸ್ತೆ ಮಂಜೂರಿಯಾಯಿತು. ಆ ರಸ್ತೆಗಾಗಿ ಊರಿನ ಮಧ್ಯದಲ್ಲಿರುವ ಮರವನ್ನು ಕಡಿಯಬೆಕೆಂದು ಈ ಇಬ್ಬರು ಬುದ್ದಿವಂತರು ಹಠ ಹಿಡಿದರು. ಮರವನ್ನೂ ಇರಗೊಡೋಣ, ರಸ್ತೆಯನ್ನೂ ನಿರ್ಮಿಸೋಣ ಎಂಬುದು ಊರವರ ವಾದ.
ಈ ಮರವನ್ನು ನೆಟ್ಟವರು ಯಾರು.? ಬೆಳಸಿದ ಮುಠಾಳ ಯಾರು? ಮುಂದೊದು ದಿನ ಈ ಊರಿನಲ್ಲಿ ರಸ್ತೆ ಆಗುತ್ತೆಂಬ ಸಾಮಾನ್ಯ ಜ್ಞಾನವೂ ಇಲ್ಲದ ಈ ಮಂದಿಗೂ ಹುಳಿ ಹಣ್ಣನ್ನು ನೀಡುವ ಈ ಮರಕ್ಕು ಧಿಕ್ಕಾರ ಎಂದರು. ಅದಕ್ಕಗಿ ಈ ಮರವನ್ನು ಕಡಿಯಲೇಬೇಕೆಂದು ಹಠ ಹಿಡಿದರು.
ನೀವು ಕಾಯಿ ತಿನ್ನುತ್ತಿರಬೇಕು, ಒಂದು ಕೆಲಸ ಮಾಡಿ ಕಾಯಿಯನ್ನು ಸ್ವಲ್ಪ ದಿನ ಇಟ್ಟರೆ ಹಣ್ಣಾಗುತ್ತೆ ಅಂದ ಹಿರಿಯರಿಗೆ, ನಿಮಗೆ ಪತ್ರ ಹರಿತ್ತಿನ ಬಗ್ಗೆ ತಿಳಿದಿದೆಯೆ? ಇದು ಎಕದಳವೋ ಅಥವ ದ್ವಿದಳವೋ ಎಂದು ತಿಳಿದಿದೆಯೆ ಎಂದು ಪ್ರಶ್ನಿಸತೊಡಗಿದರು.
ನೊಡ್ರಪ್ಪ.. ಈ ಮರವನ್ನು, ಬಸ್ ನಿಲ್ದಾಣವಾಗಿ ಬಳಸೋಣ ಇದರ ನೆರಳನ್ನು ಎಷ್ಟು ತಂಪು ಅಲ್ವೆ ಎಂದು ಹಿರಿಯರೊಬ್ಬರು ಹೇಳಿದಾಗ, ನಿಮಗೆ ಆಧುನಿಕ ಬಸ್ ನಿಲ್ದಾಣಗಳ ಬಗ್ಗೆ ಗೊತ್ತಾ? ಅದರರ ಏ.ಸಿ ಬಗ್ಗೆ ಗೊತ್ತ?? ನಮ್ಗೆ ಉತ್ತರ ಕೊಟ್ಟ ಎಲ್ಲರು ಮುಟಃಅಳರು ಎಂದು ನಿರ್ಧರಿಸಿಕೊಣ್ದು ಬೀಗತೊದಗಿದರು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet