ಹಳ್ಳಹಿಡಿಯುತ್ತಿರುವ "ಅಣ್ಣಾ" ಚಳುವಳಿ

ಹಳ್ಳಹಿಡಿಯುತ್ತಿರುವ "ಅಣ್ಣಾ" ಚಳುವಳಿ

Comments

ಬರಹ

ಜೆಪಿ ಚಳುವಳಿಯಂತೆಯೇ ಅಣ್ಣಾ ಅಭಿಯಾನವೂ ಹಳ್ಳ ಹಿಡಿಯುತ್ತಿದೆ. ಕಾರಣ, ಆಗಿನಂತೆಯೇ ಈಗಲೂ, ಅಭಿಯಾನಕಾರ ಹೆಸರಿನವರ ರಾಜಕೀಯ ಮಹತ್ವಾಕಾಂಕ್ಷೆ ಇದಕ್ಕೆ ಕಾರಣವಾಗಿದೆ. ಮೇಲಿರುವ ಮುಖಂಡರೊಬ್ಬರ ಮೇಲೆಗೂಬೆ ಕೂರಿಸುವುದು; ಮಾಧ್ಯಮದವರನ್ನು ಒಳಗೆ ಹಾಕಿಕೊಂಡು ಕಾಗೆ ಹಾರಿಸುವುದು ಅಷ್ಟೇ ಇಂದಿನ ರಾಜಕಾರಣ. ಆರೋಪ, ಸಮರ್ಥನೆ, ಪ್ರತ್ಯಾರೋಪಗಳಲ್ಲಿ ಹುರುಳಿರಬೇಕೆಂದೇನೂ ಇಲ್ಲ. ತಕ್ಷಣಕ್ಕೆ ಜನರನ್ನು ಹುಚ್ಚೆಬ್ಬಿಸುವುದು; ಎದುರಾಳಿಗಳು ಅದನ್ನು ಅಡಗಿಸಲು ಏನಾದರೊಂದು ಹೇಳುವುದು. ಇಷ್ಟಕ್ಕೇ ಮುತ್ಸದ್ದಿತನ ಸೀಮಿತವಾಗಿರುವುದರಿಂದ ಯೋಚಿಸಬಲ್ಲ ಜನತೆ ಇಡೀ ವಿದ್ಯಮಾನದಲ್ಲೇ ಆಸಕ್ತಿ ಕಲೆದುಕೊಳ್ಳುವಂತಾಗಿದೆ. ಅಧಿಕಾರದಲ್ಲಿರುವವರು ‘ಆಂಟಿ ಇನ್‌ಕಂಬೆನ್ಸಿ’ ಹೆಸರಿನಲ್ಲಿ ಕಾಲೆಳೆಯಲ್ಪಡುವುದು ಸಾಮಾನ್ಯವಾಗುತ್ತಿದೆ. ಹಾಗೆ ಎಳೆದು ಬೀಳಿಸುವವರಾದರೂ ಕಚ್ಚಿಕೊಂಡು ಜನತೆಗೆ ಪ್ರಾಮಾಣಿಕವಾಗಿ ಒಂದಷ್ಟು ಒಳ್ಳೆಯದು ಮಾಡುವ ಔದಾರ್ಯ ಹೊಂದಿರುತ್ತಾರೆಯೇ? ಖಂಡಿತ ಇಲ್ಲ! ’ಸಮ್ಮಿಶ್ರ’ ಹೆಸರಿನಲ್ಲಿ ಜವಾಬ್ದಾರಿಹೀನ ಸರಕಾರ ರಚಿಸಿಕೊಂಡು, ತಮಗಾಷ್ಟನ್ನು ಹಿರಿದುಕೊಂಡು ಜಾಗ ಖಾಲಿ ಮಾಡು ತರಾತುರಿಯಲ್ಲೇ ಇರುತ್ತಾರೆ!  ಈ ಪ್ರವೃತ್ತಿಗೆ ನಾಂದಿಯಾದ್ದು 1977ರಿಂದಲೇ. ಜೆಪಿಯವರ ದೂರದೃಷ್ಟಿಯಿಂದ "ಎಮರ್ಜನ್ಸಿ"ಯಂತಹ ಪೀಡೆಯೇನೋ ತೊಲಗಿತು; ಆದರೆ ಅವರ ಅನುಯಾಯಿಗಲೆಂದು ಸೇರಿಕೊಂಡ ಅವಕಾಶವಾದಿಗಳಿಂದಾಗಿ ’ಸಮ್ಮಿಶ್ರ ಸರಕಾರ’ದ ಪೀಡೆ ಬರತೀಯ ಪ್ರಜಾಸತ್ತೆಗೆ ಮೆಟ್ಟಿಕೊಂಡಿತು! "ಅಣ್ಣಾ ಚಳುವಳಿ" ಇದನ್ನು ಗಮನಕ್ಕೆ  ತೆಗೆದುಕೊಳ್ಳಲಿ; ಅಣ್ನಾಜಿ "ರಾಜಕಾರಣಿ"ಗಳಲ್ಲದ ಮತ್ತು ಆಗದ ಪ್ರಮಾಣಿಕರನ್ನು ಮಾತ್ರಾ ತಮ್ಮೊಂದಿಗೆ ಉಳಿಸಿಕೊಳ್ಳಲಿ; ಕಾರ್ಯಸಾಧ್ಯ ಮತ್ತು ಸಮರ್ಥನೀಯ ಧ್ಯೇಯ ಇಟ್ಟುಕೊಳ್ಳಲಿ. ’ಎರಡನೇ ಗಾಂಧೀಮಹಾತ್ಮಾ’ ಎಂಬ ನಂಬಿಕೆ ಉಳಿಸಿಕೊಳ್ಳಲಿ! 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet