ಹಳ್ಳಿ ಹೈದನ ವಿರಹಗೀತೆ
ಕವನ
ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ
ಲಂಗದಾವಣಿ ತೊಟ್ಕೊಂಡು
ಎರಡು ಜಡೆ ಹಾಕ್ಕೋಂಡು
ಮಲ್ಲಿಗೆ ಹೂವ ಮುಡ್ಕೊಂಡು
ನನ್ನುನ್ನ ನೋಡಿ ನಕ್ಕೋಳು
ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ
ನವಿಲಿನಂಗೆ ನಡೀತಾಳೆ
ಬಳ್ಳಿಯಂಗೆ ಬಳುಕ್ತಾಳೆ
ಬಾಯಿತುಂಬಾ ನಗ್ತಾಳೆ
ವಾರೆಗಣ್ಣಲ್ಲೇ ನೋಡ್ತಾಳೆ
ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ
ಸಂಪಿಗೆಯಂತಾ ಮೂಗು
ಮೀನಿನಂತಾ ಕಣ್ಣು
ದಂತದ ಮೈಬಣ್ಣ
ಅವಳ ನಡು ಬಾಳ ಸಣ್ಣ
ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ
ಮೂಗ್ನಲ್ಲಿ ಬೊಟ್ಟು ಹೊಳೀತದೆ
ಕಿವಿ ವಾಲೆ ಸೆಳೀತದೆ
ಕಾಲಿನ ಗೆಜ್ಜೆ ಸದ್ದಿಗೆ
ಕುಣೀಬೇಕು ಅನ್ನುಸ್ತದೆ
ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ
ಮೊನ್ನೆ ಜಾತ್ರೆಗೆ ಬಂದಿದ್ಲು
ಗೊಂಬೆ ಹಿಡ್ಕಂಡು ನಿಂತಿದ್ಲು
ನನ್ನುನ್ನೇ ನೋಡ್ಕಂಡು
ಗೊಂಬೆಗೆ ಮುತ್ತು ಕೊಟ್ಕಂಡು
ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ