ಹವ್ಯಕರ ಹುಡುಗ

ಹವ್ಯಕರ ಹುಡುಗ

ಕವನ

(ಬ್ರಾಹ್ಮಣರಲೊಂದು ದಲಿತ ಭಾವವನ್ನು ಅರಸುತ್ತಾ...)


ಹವ್ಯಕರ ಹುಡುಗ ನೀನು
ದೇಶ ವಿದೇಶ ಎಂದು ಸುತ್ತಬಾರದು ಮಾಣಿ...
ಶಿವಮೊಗ್ಗ ಸಾಗರಕ್ಕಿಂತ ದೊಡ್ದೂರಿಲ್ಲ,
ಎಂದು ನಂಬಿ, ಹಳ್ಳಿಯಲ್ಲೇ ಇರಬೇಕು



ಹವ್ಯಕರ ಹುಡುಗ ನೀನು
ವಿದ್ಯೆ ಕಲಿತು ಏನಾಗಬೇಕಿದೆ ಮಾಣಿ?
ವ್ಯವಸಾಯ ಮರೆಯಬಾರದು
ಹವ್ಯಕರ ಮುದ್ದಿನ ಮಾಣಿ ನೀನು
ನಿನ್ನಲ್ಲಿ ಮಹತ್ವಾಕಾಂಕ್ಷೆ ಇರಬಾರದು
ಅದಕ್ಕೆಲ್ಲಾ ಬೇರೆ ಜನ ಉಂಟು



ಹವ್ಯಕರ ಹುಡುಗ ನೀನು
ಹೆಣ್ಣು ಸಿಗದೇ ಪರಿತಪಿಸಬಾರದು
ಜಾಸ್ತಿ ಎಂದರೆ...
ನಿನ್ನ ಕೊರಳು ನೀನೆ ಹಿಚುಕು



ಹವ್ಯಕರ ಹುಡುಗ ನೀನು
ಊಟವಿಲ್ಲದ್ದಿದ್ದರೂ ಸರಿ
ತಾಂಬೂಲ ಬಿಡಬಾರದು
ತುಟಿ ಮೇಲೆ ನಗು ಮಾಸಬಾರದು...
 


ಹವ್ಯಕರ ಹುಡುಗ ನೀನು
ಬಂಡೇಳ ಬಾರದು
ಹೆಚ್ಚೆಂದರೆ...
ಮೂಲೆಯಲ್ಲಿ ಕುಳಿತು ಬಿಕ್ಕು...



ಹವ್ಯಕರ ಹುಡುಗ ನೀನು
ಬದುಕೆಲ್ಲ ಸಿಕ್ಕು ಸಿಕ್ಕಾದರು
'ಎಂತ ಇಲ್ಲೇ ಮಾರಾಯ್ತಿ!'
ಎಂದೇಳಿ ನಗಬೇಕು..



ಮರಿಬೇಡ ಮಾರಾಯ
ಹವ್ಯಕರ ಹುಡುಗ ನೀನು...

Comments