ಹಸನಾಗಿರಲಿ ನಿನ್ನ ಬಾಳ ಹೊಂಬೆಳಕು

ಹಸನಾಗಿರಲಿ ನಿನ್ನ ಬಾಳ ಹೊಂಬೆಳಕು

ಬರಹ

ಹಸನಾಗಿರಲಿ ನಿನ್ನ ಬಾಳ ಹೊಂಬೆಳಕು
ಆರದಿರಲಿ ನಿನ್ನ ಮನದ ಮನೆಯ ನಂದಾದೀಪ
ಕೊನೆಯಿರದ ನಿಮ್ಮ ಪ್ರೇಮ ಸಾಗರದಲಿ
ಮುಳುಗದಿರಲಿ ನಿಮ್ಮ ಬಾಳ ನೌಕೆ

ವಸಂತವು ಬರಲಿ ನಿಮ್ಮ ಜೀವನದಲಿ
ಮಾವು ಚಿಗುರಲಿ ನಿಮ್ಮ ಒಡನಾಡಿಯಲಿ
ಕೋಗಿಲೆಯ ಸವಿಗಾನವು ತುಂಬಲಿ ಪ್ರತಿ ಮಾತಿನಲಿ
ಹರ್ಷದ ಹುಣ್ಣಿಮೆ ಬರಲಿ ಪ್ರತಿ ರಾತ್ರಿಯಲಿ

ಎಂದೂ ಬಾಡದ ಹೂದೋಟವಾಗಿರಲಿ ನಿಮ್ಮ ಬಾಳು
ಎಂದೂ ಮಾಸದ ಹೂನಗೆಯಿರಲಿ ನಿಮ್ಮ ತುಟಿಯೊಳು
ಕೈ ಬಿಡದ ದೇವರ ಕೃಪೆಯೊಳಗಿರಲಿ ನಿಮ್ಮ ಬಾಳು
ಕೈ ಹಿಡಿದ ಜೊತೆಗಾರನ ಜೊತೆ ಬೆಚ್ಚಗಿರಲಿ ನಿನ್ನ ಬಾಳು
ಹೆಪ್ಪಿದ್ದರು ಹುಳಿಯಾಗದಿರಲಿ ನಿನ್ನ ಬಾಳು
ಬೇವಿದ್ದರು ಬೆಲ್ಲವಾಗಿರಲಿ ನಿನ್ನ ಬಾಳು
ಪ್ರತಿ ದಿನವು ಹೊಸ ಸೂರ್ಯನುದಯಿಸಲಿ ನಿಮ್ಮ ಬಾಳಿನೊಳು
ಪ್ರತಿ ರಾತ್ರಿಯು ಮಧು ಚಂದ್ರನುದಯಿಸಲಿ ನಿಮ್ಮ ಬಾಳಿನೊಳು

ಸಂಶಯದ ಬೀಜ ಬೀತ್ತಲೇಬೇಡ ನನ್ನ ತಂಗಿ
ಕಣ್ಣಹನಿಯು ನೆಲ ತಾಗಿಸಲೇಬೇಡ ನನ್ನ ತಂಗಿ
ನಿಮ್ಮ ಪ್ರೀತಿಯ ಕೂಸು ಆಡಲಿ ನಿಮ್ಮ ಮನೆತುಂಬ
ಅದನ್ನು ನೋಡಿ ಸಂತಸ ತುಂಬಲಿ ನಿಮ್ಮ ಮನತುಂಬ

ನನ್ನ ತಂಗಿಯ ಮದುವೆಗೆ ನಾನು ಕೊಟ್ಟ ಉಡುಗೊರೆ