ಹಸಿರಾಡಿಸಿ ಹೂವರಳಿಸಿ...

ಹಸಿರಾಡಿಸಿ ಹೂವರಳಿಸಿ...

ಕವನ

 

ಹಸಿರಾಡಿಸಿ ಹೂವರಳಿಸಿ 
ಹದ ಮಾಡಿಸಿ ಎದೆಯ 
ಜೊತೆಗೂಡಿಸಿ ಹೊಸ ಹಾಡಿಗೆ 
ಗಿಳಿ ಕೋಕಿಲ ಉಲಿಯ...
ಕಾಲಿಟ್ಟಿದೆ ಕದ ತಟ್ಟಿದೆ 
ಹಸನಾಗಿಹ ಹರಯ;
ನಲಿವೊಂದನೆ ಹರಿಸುವ 
ಬಾಳೆಂಬುವ ತೊರೆಯ 
ತುಂಬಲು ತಾ ಸೆಲೆಯೊಂದನು 
ನನ್ನೊಲವಿನ ಗೆಳೆಯ.
-ಮಾಲು