ಹಸಿರು ಹರಡಿದೆ
ಕವನ
ಹಸಿರು ಹರಡಿದೆ
ಬನದ ಒಳಗಡೆ
ಕನಸು ತುಂಬಿದೆ ಗೆಳತಿಯೆ
ತನುವ ಕೊಟ್ಟಿಹೆ
ಮುದದಿ ಸವಿಯುತ
ಮದನ ಮೋಹನನಾದೆನೆ
ಚಿಂತೆ ಇರದಿಹ
ಮನದ ಒಳಗಡೆ
ಮೋಹ ಪಾಶವು ಸೆಳೆದಿದೆ
ಕಂತೆ ಹಣದೊಳು
ಸುಖವು ಇಲ್ಲವು
ಎನುವ ಸತ್ಯವು ತಿಳಿದಿದೆ
ನನಸು ಕಂಡಿಹ
ಚೆಲುವಿನಾಟಕೆ
ಮಧುರ ಒಲವದು ಹಾಡಿದೆ
ಗಂಧ ಚಂದನ
ಪೂಸಿ ಕೊಂಡಿಹ
ದೇಹ ಮತ್ತಲಿ ತೇಲಿದೆ
ಪ್ರೀತಿ ಮಾತಿಗೆ
ಸೋತ ಒಡತಿಗೆ
ಮೋಸ ವಂಚನೆ ಮಾಡದೆ
ಪ್ರೇಮ ಕೊಡುತಲಿ
ಬಾಳ ಲತೆಯಲಿ
ಜೀವ ಸವಿಯನು ನೀಡಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್