ಹಸಿರೇ ಜೀವದುಸಿರು

ಹಸಿರೇ ಜೀವದುಸಿರು

ಕವನ

ಬೆಳೆಸೋಣ ನಾವು ಬೆಳೆಸೋಣ

ಪರಿಸರ ಪ್ರಜ್ಞೆಯ ಬೆಳೆಸೋಣ

ಮಾಡೋಣ ನಾವು ಮಾಡೋಣ

ಜಲಮರುಪೂರಣ ಮಾಡೋಣ

 

ಹಸಿರೇ ಜೀವದುಸಿರು ಎಂದೆಂದು ಎನ್ನೋಣ

ಪ್ರಾಣವಾಯು ಗಿಡದಲಿ ಅಡಗಿದೆ ಯಣ್ಣ

ಕಾಂಕ್ರೀಟ್  ಯೋಜನೆ ನಮಗೆ ಬೇಡಣ್ಣ

ಭೂಕಬಳಿಕೆಗೆ ಅಂತ್ಯವ ಹಾಡೋಣ

 

ಅಂತರ್ಜಲ ಮಟ್ಟದ ಒಸರು

ಹಸಿರೇ ಉಸಿರು ಜೀವದ ಬಸಿರು

ಕುಲಕೋಟಿಗಳ ಪ್ರಾಣದ ಕೊಸರು

ಬಗೆಯದಿರೆಂದು ಬುವಿಯ ಹಸುರು

 

ಜಲಮಾಲಿನ್ಯವ  ತಡೆಯೋಣ

ಹಿತಮಿತ ಇಂಧನ ಬಳಸೋಣ

ಪರಿಸರ ತೋರಣ ಹಸುರಿನ ಹೂರಣ

ನೆಮ್ಮದಿ ಬದುಕನು ಬದುಕೋಣ

 

ಸ್ವಚ್ಛ ಪರಿಸರ ಸುಂದರ ಹಂದರ

ಬುವಿಯ ರಕ್ಷಣೆ ನಮ್ಮ ಹೊಣೆ

ನಿಸರ್ಗ ಮಾತೆಗೆ ನಮಿಸೋಣ

ಓಜೋನ್ ಪದರ ರಕ್ಷಿಸೋಣ

 

-ರತ್ನಾ ಕೆ.ಭಟ್, ತಲಂಜೇರಿ

 

ಚಿತ್ರ್