ಹಸಿವು

ಹಸಿವು

ಕವನ

 
ಯಾರೊ ಕರೆದ ಕರೆ ನಿನಗೆ ಕೇಳಿತೆ?
ಹಸಿದು ಕೂಗುತಿರುವುದು ನನಗೆ ಕೇಳಿತೆ...
ಹುಟ್ಟಿಸಿದ ದೈವವು ಹುಲ್ಲನ್ನು ಕೊಡದೆ
ಹಸಿವಾಗಿ ಬಂದು ಕಾಡುತಿಹನೆ
ತಿಳಿದಿರುವೆಯ ನೀನು ಹಸಿವಿನ ನೋವನು?
ನೂರಂತಸ್ತಿನ ಮಹಡಿಯಲ್ಲಿ ಕುಳಿತ ನಿನಗೆ ಹೇಗೆ ತಿಳಿವುದು..
ಕಿತ್ತು ತಿನ್ನೊ ಬಡತನ, ಅದಕು ನಿನ್ನ ಒಡೆತನ
ಪ್ರೀತಿಯ ಆತ್ಮಾಹುತಿಗೆ ನಿನ್ನ ಸಿರಿವಂತಿಯೆ ಸೋಪಾನ
ಸೂರು ನೆರಳಿಲ್ಲದೆ ನರಳಿ ನಡುಗುತಿಹರು
ಹುಟ್ಟಿನಿಂದ ಸಾವಿನೊರೆಗು ನಲಿವೆ ಕಾಣರು
ಗಂಧದ ಕೊರಡಂತೆ ತೆಯ್ಯುವೆ ನೀನು
ಅವರ ಪ್ರತಿ ಬೆವರ ಹನಿ ಸುಮ್ಮನೆ ಬಿಡದು
ನಿನ್ನ ಕಣ್ಣಮುಂದೆಯೆ ನೆತ್ತರು ಹರಿವುದು
ಅವರ ಜೀವ ತಿನ್ನುವ ನಿನಗೆ ಹಸಿವು ತಿಳಿಯದು
ಹಸಿವನು ಹಸಿ-ಹಸಿಯಾಗಿ ಕಂಡಿರುವರು ಅವರು
ಸಿರಿಯ ಮೆಟ್ಟಿ ನಿಲ್ಲೊ ಶಕ್ತಿ ಹಸಿವಿಗಿರುವುದು
                                     -ಸುರೇಂದ್ರ ನಾಡಿಗ್ ೨೦೦೨