ಹಸಿ ಗೇರುಬೀಜ, ಆಲೂಗಡ್ಡೆ ಹುಮ್ಮಣ
ಬೇಕಿರುವ ಸಾಮಗ್ರಿ
ಹಸಿ ಗೇರುಬೀಜ - ೨೦೦ಗ್ರಾಂ, ಆಲೂಗಡ್ಡೆ - ೧/೪ ಕೆ.ಜಿ, ಹುರಿದ ಕೆಂಪು ಮೆಣಸು - ೮, ತೆಂಗಿನಕಾಯಿ: ೧/೨ ಹೋಳು, ಹುಳಿ ಸ್ವಲ್ಪ, ಇಂಗು, ಸಾಸಿವೆ ೧ ಚಮಚ, ಕರಿಬೇವು ೧೦ ಎಲೆ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಸಿಪ್ಪೆ ಸುಲಿದ ಹಸಿ ಗೇರುಬೀಜ ಮತ್ತು ಆಲೂಗಡ್ಡೆಯನ್ನು ಬೇಯಿಸಿರಿ. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನ ಕಾಯಿತುರಿ, ಸ್ವಲ್ಪ ಹುಳಿ, ಹುರಿದ ಕೆಂಪು ಮೆಣಸು ಹಾಕಿ ನುಣ್ಣಗೆ ರುಬ್ಬಿರಿ. ಬೇಯಿಸಿ ಇಟ್ಟ ಗೇರುಬೀಜ ಮತ್ತು ಆಲೂಗಡ್ಡೆಗೆ ಈ ಮಸಾಲೆ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿರಿ. ಆನಂತರ ಒಗ್ಗರಣೆ ಹಾಕಿ. ಒಗ್ಗರಣೆಗೆ ೫ ಚಮಚ ತೆಂಗಿನೆಣ್ಣೆ, ೧ ಚಮಚ ಸಾಸಿವೆ, ಇಂಗು, ಕರಿಬೇವು ಉಪಯೋಗಿಸಿ. ಈಗ ಹಸಿ ಗೇರುಬೀಜ, ಆಲೂಗಡ್ಡೆ ಹುಮ್ಮಣ ಊಟಕ್ಕೆ ರೆಡಿ.
-- ಗಾಯತ್ರಿ ಕಾಮತ್