ಹಾಗಲಕಾಯಿ ಕೋಸಂಬರಿ
ಬೇಕಿರುವ ಸಾಮಗ್ರಿ
೨ ಚಿಕ್ಕ ಹಾಗಲಕಾಯಿ, ೨ ಈರುಳ್ಳಿ, ೫ ಹಸಿಮೆಣಸಿನಕಾಯಿ, ತೆಂಗಿನೆಣ್ಣೆ, ಸ್ವಲ್ಪ ತೆಂಗಿನಕಾಯಿತುರಿ, ಉಪ್ಪು
ತಯಾರಿಸುವ ವಿಧಾನ
೨ ಚಿಕ್ಕ ಹಾಗಲಕಾಯಿಗಳನ್ನು ಹಿಂದಿನ ದಿನವೇ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಉಪ್ಪಿನೊಡನೆ ಬೆರೆಸಿ ಇಡಿ. ಬೆಳಿಗ್ಗೆ ಹಾಗಲಕಾಯಿಗಳಲ್ಲಿದ್ದ ಉಪ್ಪನ್ನೆಲ್ಲ ಹಿಂಡಿ ತೆಗೆಯಿರಿ. ನಂತರ ಕಾವಲಿಯಲ್ಲಿ ಎಣ್ಣೆಯಿಟ್ಟು ಹಾಗಲಕಾಯಿ ತುಂಡುಗಳನ್ನು ಕೆಂಪು ಬಣ್ಣ ಬರುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ.
ಊಟ ಮಾಡುವ ಹೊತ್ತಿಗೆ ೨ ಈರುಳ್ಳಿಯನ್ನು ಸಣ್ಣಗೆ ಹಚ್ಚಿ. ೫ ಹಸಿ ಮೆಣಸಿನಕಾಯನ್ನು ಚಿಕ್ಕದಾಗಿ ಹಚ್ಚಿರಿ. ಸ್ವಲ್ಪ ತೆಂಗಿನಕಾಯಿ ತುರಿಯೊಂದಿಗೆ, ಹಚ್ಚಿದ ಈರುಳ್ಳಿ, ಹಸಿಮೆಣಸಿನಕಾಯನ್ನು ಮತ್ತು ಹುರಿದಿಟ್ಟ ಹಾಗಲಕಾಯಿ ತುಂಡುಗಳನ್ನು ಮಿಶ್ರಣಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಹಾಗಲಕಾಯಿ ಕೋಸಂಬರಿ, ನಿಮ್ಮ ಊಟಕ್ಕೆ ರೆಡಿ.
- ಗಾಯತ್ರಿ ಕಾಮತ್