ಹಾಗಲಕಾಯಿ ತುಂಬಿದ ಮಸಾಲೆ

ಹಾಗಲಕಾಯಿ ತುಂಬಿದ ಮಸಾಲೆ

ಬೇಕಿರುವ ಸಾಮಗ್ರಿ

ಹಾಗಲಕಾಯಿ, ಒಣ ಮೆಣಸಿನಕಾಯಿ, ಕಡ್ಲೇಬೇಳೆ, ಕೊತ್ತಂಬರಿ, ಎಳ್ಳು, ಓಮ, ಜೀರಿಗೆ, ಇಂಗು ಅಥವಾ ಬೆಳ್ಳುಳ್ಳಿ, ಕಾಯಿತುರಿ, ರುಚಿಗೆ ಉಪ್ಪು ಹುಳಿಪುಡಿ, ಚಿಟಕಿ ಸಕ್ಕರೆ, ಎಣ್ಣೆ.

ತಯಾರಿಸುವ ವಿಧಾನ

ಮೊದಲು ಒಣ ಮೆಣಸಿನ ಕಾಯಿ, ಕಡ್ಲೇಬೇಳೆ ಕೊತ್ತಂಬರಿ, ಎಳ್ಳು, ಓಮ, ಜೀರಿಗೆ ಇಂಗು ಅಥವಾ ಬೇಳ್ಳುಳ್ಳಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನ ತುರಿಯ ಜೊತೆ ಪುಡಿ ಮಾಡಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಹುಳಿಪುಡಿ ಹಾಕಿ ಕಲಸಿಕೊಳ್ಳಿ. ಹಾಗಲಕಾಯಿಯನ್ನು ಕತ್ತರಿಸಿ ಭಾಗ ಮಾಡಿ ಸ್ವಲ್ಪ ಉಪ್ಪು ಹುಳಿ ಹಾಕಿ ಬೇಯಿಸಿಕೊಳ್ಳಿ. ನಂತರ ಇದರೊಳಗಿನ ಬೀಜವನ್ನು ತೆಗೆದು ಇದರೊಳಗೆ ಕಲಸಿದ ಮಸಾಲೆಯನ್ನು ತುಂಬಿ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ.

-ಕಲ್ಪನಾ ಪ್ರಭಾಕರ ಸೋಮನಳ್ಳಿ