ಹಾಗಲಕಾಯಿ : ಬಾಯಿಗೆ ಕಹಿ-ಆರೋಗ್ಯಕ್ಕೆ ಸಿಹಿ
ಮಾರುಕಟ್ಟೆಯಲ್ಲಿ ಈಗಂತೂ ಹಾಗಲಕಾಯಿ ಗೊತ್ತಿಲ್ಲ ಎನ್ನುವವರಿಲ್ಲ. ಬೇರೆ ಬೇರೆ ಬಣ್ಣದಲ್ಲಿ ಸಿಗುತ್ತದೆ. ಇದು ಸುಮಾರು ಹದಿನೈದು ಇಪ್ಪತ್ತು ಸೆಂಟಿಮೀಟರ್ ತನಕವೂ ಉದ್ದ ಇರುತ್ತದೆ.
ಹಾಗಲಕಾಯಿಯಲ್ಲಿ ಜವಾರಿ ಹಾಗಲು ಸಹಜವಾಗಿ ಕುರುಚಲು ಕಾಡುಗಳಲ್ಲಿ ಬಿಡುತ್ತದೆ. ಇದನ್ನು ಚಿಟ್ಟಾಗಲು ಅಥವಾ ರುದ್ರಾಕ್ಷಿ ಹಾಗಲು ಎನ್ನುತ್ತಾರೆ. ಇದು ಹೆಚ್ಚು ಔಷಧೀಯ ಗುಣ ಹೊಂದಿದೆ. ಇದು ಒಂದರಿಂದ ಎರಡು ಇಂಚು ಉದ್ದ ಅಷ್ಟೇ.
ಇದರಲ್ಲಿ ಮತ್ತೊಂದು ಜಾತಿ ಮಡಾಗಲು (ಕಾಟು ಪೀರೆ) ಇದು ಕಿರುಗಹಿ. ಇದರ ಬೀಜ ತುಂಬಾ ಮೆಡಿಸಿನ್ ಗುಣ ಹೊಂದಿದೆ. ಇದು ಅಡಿಗೆಯಲ್ಲಿ ತುಂಬಾ ರುಚಿ. ಇದು ಇಗಾಗಲೇ ಮಾರುಕಟ್ಟೆ ಯಲ್ಲಿ ಸಾಕಷ್ಟು ಲಭ್ಯವಿದೆ. ಮೊದಲು ಕಾಡು ತಿರುಗಿ ಸಂಗ್ರಹಿಸಬೇಕಿತ್ತು.
ಹಾಗಲಕಾಯಿ, ಎಲೆ, ಹೂವು, ಬಳ್ಳಿ ಹೆಚ್ಚು ಔಷಧಿಯಾಗಿ ಉಪಯುಕ್ತ.
* ಹಾಗಲಕಾಯಿಯ ಔಷಧೀಯ ಗುಣಗಳಾದ ಆಂಟಿಡಯಾಬಿಟಿಕ್, ಆಂಟಿಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಒಳ್ಳೆಯ ಅಹಾರ.
* ಸೋಂಕುಗಳು ಮತ್ತು ಮುಟ್ಟಿನ ಸಮಸ್ಯೆಗಳಲ್ಲಿ ಸೊಪ್ಪಿನ ರಸದಿಂದ ತಯಾರಿಸಿ ಆಗಿಂದಾಗ್ಗೆ ಕುಡಿದರೆ ಗುಣವಾಗುತ್ತದೆ.
* ಆಹಾರದಲ್ಲಿ ಬಳಸಿದರೆ ಕಫದ ಕೀಲು ನೋವು ನಿವಾರಣೆಯಾಗುತ್ತದೆ.
* ದೀರ್ಘಕಾಲದ ಜ್ವರದ ತಾಪ ಕಡಿಮೆಯಾಗುತ್ತದೆ
* ಕಾಯಿಯ ಜ್ಯೂಸ್ ಕಾಮಾಲೆ ಮತ್ತು ಯಕೃತ್ತಿನ ಕಾಯಿಲೆಗಳು ಗುಣವಾಗುತ್ತದೆ.
* ದೀರ್ಘಕಾಲದ ಚರ್ಮ ರೋಗಗಳ, ಸುಟ್ಟಗಾಯಗಳು ಮತ್ತು ದದ್ದುಗಳಿಗೆ ಹಚ್ಚಿದರೆ ಗುಣವಾಗುತ್ತದೆ.
* ಹಾಗಲಕಾಯಿಯ ಮಾಗಿದ ಹಣ್ಣುಗಳಿಗೆ ಸ್ವಲ್ಪ ಉಪ್ಪು ಹಾಕಿ ಮೊಸರು ಸೇರಿಸಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಹುಣ್ಣುಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಸಹಾಯ.
* ಹಾಗಲಕಾಯಿ ರಸವನ್ನು ನಿಂಬೆಹಣ್ಣಿನ ರಸ ಅಥವಾ ಕಿತ್ತಳೆ ಹಣ್ಣಿನ ರಸ ಸೇರಿಸಿ ಮುಖ ಮೈಗೆ ಹಚ್ಚಿ ಮಸಾಜ್ ಮಾಡಿ ಒಣಗಿದ ನಂತರ ಸ್ನಾನ ಮಾಡಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.
* ಹಾಗಲಕಾಯಿ ಜ್ಯೂಸ್ ಕೂದಲಿಗೆ ಹಚ್ಚಿದರೆ ಹೊಳಪು ಬರುತ್ತದೆ.
* ಎಲೆರಸಕ್ಕೆ ಅರಿಶಿನ ಸೇರಿಸಿ ಕಷಾಯ ಮಾಡಿ ಕುಡಿದರೆ ತೇಗು ಮತ್ತು ವಾಯು ಬಾಧೆ ಗುಣವಾಗುತ್ತದೆ.
* ಹೂವಿನ ರಸವನ್ನು ಕಿವಿಯಲ್ಲಿ ಹಾಕುವುದರಿಂದ ಕಿವಿಸೋರುವುದು ನಿಲ್ಲುತ್ತದೆ.
* ಹಾವು ಕಚ್ಚಿದ ಕೂಡಲೇ ಎಲೆಯರಸ ಕುಡಿಸಿದರೆ ವಾಂತಿ ಆಗಿ ವಿಷ ಇಳಿಯುತ್ತದೆ.
* ಎಲೆರಸ ಅಥವಾ ಕಾಯಿ ರಸಕ್ಕೆ ಕಲ್ಲು ಸಕ್ಕರೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.
* ಎಲೆಗಳನ್ನು ರಸತೆಗೆದು ಆಗ ತಾನೆ ಆದ ಗಾಯಕ್ಕೆ ಹಚ್ಚಿದರೆ ರಕ್ತ ನಿಂತು ಗಾಯ ಬೇಗನೆ ವಾಸಿಯಾಗುತ್ತದೆ.
* ಕಾಯಿ ಅಥವಾ ಎಲೆರಸಕ್ಕೆ ಮೊಸರು ಸೇರಿಸಿ ಮೈಗೆಲ್ಲಾ ಹಚ್ಚಿ ಒಣಗಿದ ನಂತರ ಸ್ನಾನ ಮಾಡಿದರೆ ಪಿತ್ತಭಾದೆ ಗುಣವಾಗುತ್ತದೆ.
* ಈರುಳ್ಳಿ ಹಾಗಲು ಸೇರಿಸಿ ರಸತೆಗೆದು ಅರ್ಧ ಗಂಟೆಗೆ ಒಮ್ಮೆ ಕುಡಿಯುತ್ತಿದ್ದರೆ ಕಾಲರಾ ಗುಣವಾಗುತ್ತದೆ.
* ವಾರಕ್ಕೊಮ್ಮೆ ಕಾಯಿ ಅಥವಾ ಎಲೆರಸಕ್ಕೆ ತೆಂಗಿನ ಹಾಲು ಸೇರಿಸಿ ಕುಡಿಯುತ್ತಿದ್ದರೆ ಭೇದಿ ಆಗಿ ಹೊಟ್ಟೆ ಹುಳು ಹೊರಹೋಗುವುದು.
* ಬಳ್ಳಿಯನ್ನು ಅರೆದು ಪೇಸ್ಟ್ ಮಾಡಿ ಅಂಗಾಲಿಗೆ ಹಚ್ಚಿದರೆ ಉರಿ ಶಮನವಾಗುತ್ತದೆ.
* ಹಾಗಲಕಾಯಿ, ಕಹಿಬೇವು, ಕರಿಬೇವು ಸಮಪ್ರಮಾಣದಲ್ಲಿ ಸೇವನೆಯಿಂದ ಶುಗರ್ ಹತೋಟಿಗೆ ಬರುತ್ತದೆ.
* ಹಾಗಲ ಎಲೆ ರಸವನ್ನು ಹೆಂಚಿನಲ್ಲಿ ಬಿಸಿ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಗುಣವಾಗುತ್ತದೆ.
* ಇದರ ಪಂಚಾಂಗವೂ ಪಶುರೋಗಗಳಿಗೆ ತುಂಬಾ ಉಪಯುಕ್ತ .
-ಸುಮನಾ ಮಳಲಗದ್ದೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ