ಹಾಡಬೇಕು ಗೆಳತಿ
ಕವನ
ದುಡಿಯಬೇಕು ಗೆಳತಿ
ನಾವು ದುಡಿಯಬೇಕು ಗೆಳತಿ
ರನ್ನ ಚಿನ್ನ ಮೀರಿದಾನಂದಕಾಗಿ
ದುಡಿಯಬೇಕು ಗೆಳತಿ/
ಸೊಗಸಲಿ ನಡೆಯಬೇಕು ಗೆಳತಿ!
ನುಡಿಯಬೇಕು ಗೆಳತಿ
ತಾಯ್ನುಡಿ ನುಡಿಯಬೇಕು ಗೆಳತಿ
ಪರಭಾಷೆ ಮೀರಿ ಮಮತೆ ಕನ್ನಡ
ನುಡಿಯಬೇಕು ಗೆಳತಿ/
ಕನ್ನಡ ನುಡಿಯಬೇಕು ಗೆಳತಿ!
ಪಡೆಯಬೇಕು ಗೆಳತಿ
ಸನ್ಮತಿ ಪಡೆಯಬೇಕು ಗೆಳತಿ
ಒಬ್ಬರಿಗೊಬ್ಬರ ಸಹಾಯ ಹಸ್ತವ
ಹಿಡಿಯಬೇಕು ಗೆಳತಿ/
ಉನ್ನತಿ ಪಡೆಯಬೇಕು ಗೆಳತಿ!
ಹಾಡಬೇಕು ಗೆಳತಿ
ನಾಡುದ್ದಕೂ ಹಾಡಬೇಕು ಗೆಳತಿ
ಐಡಿಎಫ್ ಸಾಹಸಗಾಥೆಯ
ಹಾಡಬೇಕು ಗೆಳತಿ/
ಸೊಗಸೂಡಬೇಕು ಗೆಳತಿ!