ಹಾಡುತ್ತ ಕುಣಿಯೋಣ ಬನ್ನಿರೆ
ಕವನ
ಹಾಡುತ್ತ ಕುಣಿಯೋಣ ಬನ್ನಿರೆ
ನಾವೆಲ್ಲ ಕುಣಿಯುತ್ತ ನಲಿಯೋಣ ಬನ್ನಿರೆ
ಮಾವು ಚಿಗುರಲು ಕೋಗಿಲೆ ಗಾಯನ
ಮೋಡವ ನೋಡಲು ನವಿಲ ನರ್ತನ
ಹೂವಾಗಿ ಅರಳಿದೆ ಈ ಮನ
ಸ್ವರಕೇ ಸ್ವರವ ಸೇರಿಸೋಣ ನಾವು
ಹಾಡುತ್ತ ಹಾಡುತ್ತ ಕುಣಿಯೋಣ
ಕನಸಿನ ಕಣ್ಣಿಗೆ ಹಚ್ಚಿ ಕಾಡಿಗೆ
ಚಂದದ ಮುಡಿಯಲಿ ಮುಡಿದು ಮಲ್ಲಿಗೆ
ಗೆಜ್ಜೆಯ ಕಟ್ಟಿ ಕಾಲಿಗೆ
ಹೆಜ್ಜೆಗೆ ಹೆಜ್ಜೆ ಹಾಕೋಣ ನಾವು
ಕುಣಿಯುತ್ತ ಕುಣಿಯುತ್ತ ನಲಿಯೋಣ
ದಿನ ದಿನ ಹೆಚ್ಚಲಿ ಸ್ನೇಹ ಸರಸ
ಉಕ್ಕಿ ಹರಿಯಲಿ ಎಲ್ಲೆಡೆ ಸಂತಸ
ಬಾಳಲಿ ತುಂಬಿರಲಿ ಸಮರಸ
ವಿರಸವ ಮರೆತು ಸಾಗೋಣ ನಾವು
ಹಾಡುತ್ತ ಕುಣಿಯತ್ತ ನಲಿಯೋಣ