ಹಾಯ್ಕುಗಳು ಮತ್ತು ಗಝಲ್

ಹಾಯ್ಕುಗಳು ಮತ್ತು ಗಝಲ್

ಕವನ

ಜನ್ಮವಿದ್ದರೆ

ನನಸಾಗುವಿರೇನು 

ಕನಸುಗಳೆ !

 

ತಪ್ಪುಗಳನ್ನು

ಮಾಡದಿರಿ ಜನರೆ

ಕ್ಷಣಿಕವದು !

 

ಮುತ್ತುಗಳಲ್ಲಿ

ಮನ ತೆರೆಯುವಂಥ

ಗುಣವಿಹುದು !

 

ಚಿಂತೆಯಿರದ

ಮನದೊಳಗೆಯೆಲ್ಲ

ಸಾಂತ್ವನವಿದೆ !

***

ಗಝಲ್

 

ಗೊತ್ತಿರುವುದನ್ನು ಇಂದಾದರೂ ಗೊತ್ತಿಲ್ಲದವರಿಗೆ  ಹೇಳಿ ಕೊಡು

ಕಲಿತಿರುವುದ ಎಂದೆಂದಿಗೂ ಅನುಭವವಿಲ್ಲದವರಿಗೆ ಹೇಳಿ ಕೊಡು

 

ಕಸಂಟು ಮಾಡುತ್ತಲೇ ಇನ್ನೊಬ್ಬರ ಛೇಡಿಸುವುದು ಯಾಕೊ

ಬಾಳಿನೊಳಗೆ ಯಾವುದೇ ಛಲವಿಲ್ಲದವರಿಗೆ ಹೇಳಿ ಕೊಡು

 

ಬರೆದುದೆಲ್ಲವೂ ಸಾಹಿತ್ಯವಲ್ಲ ಎಂಬುವುದು ಎಲ್ಲರಿಗೂ ತಿಳಿದಿದೆ

ಬರವಣಿಗೆಯಲಿ ತನ್ನದೆನುವ ಗುರಿಯಿಲ್ಲದವರಿಗೆ ಹೇಳಿ ಕೊಡು

 

ಉಪದೇಶದಿಂದ ಮನದೊಳಗಿನ ಕೊಳೆಕಳೆದು ಫಸಲು ಬರುವುದೆ 

ಹತ್ತೂರಿನ ದಾರಿಯಲಿ ಒಮ್ಮೆಯೂ ಸುತ್ತಿಲ್ಲದವರಿಗೆ ಹೇಳಿ ಕೊಡು

 

ಜೀವನದ ರೀತಿ ರಿವಾಜುಗಳ ಕಲಿಯದವರು ಪಂಡಿತರೆ ಈಶಾ

ಎಲ್ಲವೂ ಗೊತ್ತಿದೆಯೆನುವ ಮತಿಯಿಲ್ಲದವರಿಗೆ ಹೇಳಿ ಕೊಡು

 

-ಹಾ ಮ ಸತೀಶ ಬೆಂಗಳೂರು

ಚಿತ್ರಕೃಪೆ: ಇಂಟರ್ನೆಟ್ ತಾಣ

ಚಿತ್ರ್