ಹಾರೈಕೆ
ಕವನ
ಭುವಿಯ ಭಾಂದವರು ನಾವು
ಒಂದೇ ನಮ್ಮ ಕಾಯ್ವ ಒಡಲು
ತುತ್ತನಿತ್ತ ಕೈಯ ನೆನೆಯಬೇಕು
ಹಸಿರ ಸಿರಿಯ ಪೊರೆಯಬೇಕು.
ದ್ವೇಷಗಳ ಕಳೆಯನಿಂದೇ ಕಡಿಯಬೇಕು
ಯುದ್ಧವ ಪ್ರೀತಿಯಿಂದ ಮಣಿಸಬೇಕು
ಗಡಿಗಳ ಭೇದವ ಕುಡಿಗಳು ಮೀರಬೇಕು
ನಾವು ಒಂದೇ ಕೊಂಡಿಗಳಂತಿರಬೇಕು.
ಸಾಕಿನ್ನು ಈ ಯಂತ್ರದ ಬದುಕು
ಬೇಕಿದೆ ಭಾವನೆಗಳ ಸೇತು
ಪರರ ನೋವಿಗೆ ಮಿಡಿಯಬೇಕು
ಅವರ ಖುಷಿಯಲಿ ಬೆರೆಯಬೇಕು.
ಭುವಿಯಿರಲು ಕುಟುಂಬದಂತೆ
ಭವಿಷ್ಯ ನಮಗೆ ವರದಾನವಂತೆ
ಕನಸಾಗದಿರಲಿ ಈ ಹಾರೈಕೆ
ಈಡೇರಲಿ ಈ ಎಲ್ಲಾ ಬಯಕೆ!!
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
