ಹಾಲು ಉತ್ಪಾದನೆಯಲ್ಲಿ ಅಜೋಲ ಪಾತ್ರ

ಹಾಲು ಉತ್ಪಾದನೆಯಲ್ಲಿ ಅಜೋಲ ಪಾತ್ರ

ಬರಹ

ಅಜೋಲ ನೀರಿನ ಮೇಲೆ ಬೆಳೆಯುವ ಕೆಳವರ್ಗದ ಸಸ್ಯ, ಹೆಚ್ಚಾಗಿ ನೀರಾವರಿ ಕಾಲುವೆ, ಕೆರೆ ಅಂಗಲ, ಮತ್ತು ಭತ್ತದ ಗದ್ದೆಗಳಲ್ಲಿ ಕಂಡುಬರುವ ಸಾಮಾನ್ಯ ಸಸ್ಯ. ಇದರ ಸಸ್ಯ ವೈಜ್ಗಾನಿಕ ಹೆಸರು ಅಜೋಲ ಪಿನ್ನತ (Azola pinnata) ಮತ್ತು ಇದು ಅಜೋಲೆಸಿ (Azolaceae) ಕುಟುಂಬಕ್ಕೆ ಸೇರಿದ ಕೆಳ ವರ್ಗದ ಸಸ್ಯ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ, ಮಲೆನಾಡಿನ ಸೆರಗಿನಲ್ಲಿ ಮನೆಯ ಮೇಲೆ, ದಾರಿ ಪಕ್ಕದಲ್ಲಿ ಕಲ್ಲಿನ ಮೇಲೆ ಮಳೆಗಾಲದಲ್ಲಿ ಕಂಡು ಬರುತ್ತದೆ. ಈ ಕೆಳ ವರ್ಗದ ಸಸ್ಯದಲ್ಲಿ ಸಸಾರಜನಕ ಮತ್ತು ಪ್ರೋಟಿನ ಅಂಶ ಅಧಿಕವಾಗಿದ್ದು, ಸ್ವಲ್ಪವೆ ಸ್ವಲ್ಪ ಪಶು ಆಹಾರದ ಜೋತೆಗೆ ಮಿಶ್ರಣಮಾಡಿ ಕೊಡಬಹುದು. ಅಜೋಲ ದನ-ಕರುಗಳಿಗೆ ಒಂದು ಉತ್ತಮ ಆಹಾರ, ಮಲೆ ಅಂಗಲದಲ್ಲಿಯೂ ಸಹ ಬೆಳೆಯಬಹುದು. ಕನಕಪುರ ತಾಲ್ಲುಕು ಮರಳವಾಡಿ ಗ್ರಾಮದ ಪಕ್ಕದಲ್ಲಿ ಗ್ರೀನ್ ಪ್ರತಿಷ್ಠಾನ ವತಿಯಿಂದ ಸುಮಾರು ರೈತ ವರ್ಗ ತಮ್ಮ ತಮ್ಮ ಜಾಗದಲ್ಲಿ ಅಜೋಲವನ್ನು ಹೆಮ್ಮೆಯಿಂದ ಬೆಳೆಯುತ್ತಿದ್ದಾರೆ.

ಬೆಳೆಯುವ ವಿಧಾನ:

ಸುಮಾರು ಮೂರು ಅಡಿ ಅಗಲ, ಒಂದು ಅಡಿ ಆಳ, ಮತ್ತು ಉದ್ದ ನಮಗೆ ಅನುಕೂಲ ತಕ್ಕಂತೆ (ಬೆಳೆಯುವ ಪ್ರಮಾಣ ನೋಡಿಕೊಂಡು) ಗುಂಡಿಯನ್ನು ತೆಗೆಯಬೇಕು ಅಥವಾ ಸಿಮೆಂಟ್ ತೊಟ್ಟಿಯನ್ನು ಕಟ್ಟಿಕೊಳ್ಳಬಹುದು. ತೆಗೆದ ಗುಂಡಿ ಅಥವಾ ತೊಟ್ಟಿಗೆ ಪ್ಲಾಸ್ಟಿಕ್ ಹಾಳೆಯನ್ನು ಹಾಸಬೇಕು, ನೀರು ಕೆಳಗೆ ಹೋಗದೆ ಹಾಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್ ಹಾಳೆಯುನ್ನು ಸುತ್ತಲೂ ಮಣ್ಣು ಮತ್ತು ಕಲ್ಲಿನಿಂದ ಬಿಗಿಗೊಳಿಸಬೇಕು. ಗುಂಡಿ ಅಥವಾ ತೊಟ್ಟಿಯ ಮೇಲೆ ಚಪ್ಪರವನ್ನು ಹಾಕಬೇಕು, ಇದರಿಂದ ಮಳೆ ನೀರು ಮತ್ತು ಬಿಸಿಲಿನಿಂದ ಅಜೋಲವನ್ನು ರಕ್ಷಿಸಬಹುದು. ಪ್ಲಾಸ್ಟಿಕ್ ಹಾಳೆಯನ್ನು ಹಾಕಿದ ತೊಟ್ಟಿ ಅಥವಾ ಗುಂಡಿಯ ಮೇಲೆ ಪೂರ್ತಿಯಾಗಿ ನೀರು ತುಂಬಬೇಕು ಅದರ ಜೋತೆಗೆ ಸ್ವಲ್ಪ ಸಗಣಿ (೧ ಕಿ.ಲೊ/ ೨ ಕಿ.ಲೊ) ಮತ್ತು ತಿಳಿ ಮಣ್ಣನ್ನು ನೀರಿನಲ್ಲಿ ಹಾಕಿ ಕದಡಬೇಕು ಅಥವಾ ಮಿಶ್ರಣ ಮಾಡಬೇಕು, ನಂತರ ಅಜೋಲವನ್ನು ನೀರು ಹಾಕಿದ ತೊಟ್ಟಿ ಅಥವಾ ಗುಂಡಿಯಲ್ಲಿ ಬಿಡಬೇಕು. ನೀರು ಕಡಿಮೆಯಾದಂತೆ ಮತ್ತೆ ಮತ್ತೆ ನೀರನ್ನು ಹಾಕುತ್ತಿರಬೇಕು, ನೀರು ಸತತವಾಗಿ ತೊಟ್ಟಿ ಅಥವಾ ಗುಂಡಿಯಲ್ಲಿ ಇರಬೇಕು, ಇಲ್ಲದಿದ್ದರೆ ಅಜೋಲ ಬೆಳೆಯುದಿಲ್ಲ. ಅಜೋಲ ಬಿಟ್ಟು ೨೧ ರಿಂದ ೩೦ ದಿನಗಳ ನಂತರ ಅಜೋಲವನ್ನು ತೆಗೆದು ಜಾನುವಾರುಗಳಿಗೆ ಕೊಡಬಹುದು.