ಹಾಲು ಮಾರುವ ಹುಡುಗಿ

ಹಾಲು ಮಾರುವ ಹುಡುಗಿ

ಬರಹ

ಹಾಲು ಮಾರುತಾ ಬರುವಳು
ಹಾಲಿನಂತೆ ನಗುವ ಚಲುವೆ
ಬೆಳ್ಳಿ ತಂಬಿಗೆಯಲ್ಲಿ ನೊರೆ ಹಾಲು ತರವಳು
ಒಮ್ಮೆ ತಿರುಗಿ ನಗುವ ಅವಳ ಒಲವೆ||
ಮುಂಜಾನೆ ಮಂಜಿನ ಮೇಲೆ
ಗೆಜ್ಜೆ ಕಾಲಿನ ಹೆಜ್ಜೆ ಇಡುತ್ತಾ
ಹೊಂಬಣ್ಣದ ಮೇಘದ ಮೇಲೆ
ಮೇಘಧೂತನಂತೆ ತಾ ಬಳಕುತ್ತಾ||
ಹಸಿರು ಪೈರುಗಳ ಮೇಲೆ
ಕೈಯಾಡಿಸಿ 'ಕಿಲ ಕಿಲ' ನಗುತ್ತಾ
ದೂರದ ಬೆಟ್ಟದ ಮೇಲೆ
ಹಕ್ಕಿ ಹಾಡಿನಂತೆ ನಾ ಹಾಡುತ್ತಾ||
ಅವಳ ಗೆಜ್ಜೆ ದನಿಯೇ
ನನಗದು ಮುಂಜಾವು
ಅವಳ 'ಗುನು ಗುನು' ಹಾಡೇ
ನನಗದು ಸುಪ್ರಭಾತ||