ಹಾಸನ ಜಿಲ್ಲೆಯ ಕುಂತಿಗುಡ್ಡದ ಬಗ್ಗೆ ನಾನು ಬರೆದ ಲೇಖನದ ವಿಷಯವಾಗಿ
ಬರಹ
ಮೇಲ್ಕಂಡ ವಿಷಯದಲ್ಲಿ ಬಂದಿರುವ ಪ್ರತಿಕ್ರಿಯೆಯ ಬಗ್ಗೆ ಹೇಳುವುದೇನೆಂದರೆ, ನಾನು ಲೇಖನ ಬರೆದು, ಸಂಪದದಲ್ಲಿ ಪ್ರಕಟವಾದನಂತರ ೨೦೦೫ರಲ್ಲಿ ಮಾನ್ಯ ಸ್ವಾಮಿಯವರು ಬರೆದಿರುವ ಲೇಖನವನ್ನು ನೋಡಿದೆ. ಸ್ವಾಮಿಯವರು ಬರೆದಿರುವ ಸುಂದರ ಲೇಖನವು ಶ್ರೀರಂಗಪಟ್ಟಣದ ಹತ್ತಿರವಿರುವ ಕುಂತಿಬೆಟ್ಟದ ಬಗ್ಗೆ. ಅವರು ಕಳುಹಿಸಿರುವ ಚಿತ್ರಗಳೂ ನಾನು ತೆಗೆದಿರುವ ಚಿತ್ರಗಳೂ ಬೇರೆ ಬೇರೆ ಸ್ಥಳಗಳದ್ದಾಗಿವೆ. ನಾನು ಬರೆದಿರುವುದು ಹಾಸನ ನಗರದ ಹತ್ತಿರವಿರುವ ಕುಂತಿ ಗುಡ್ಡದ ಬಗ್ಗೆ ನಾನು ತೆಗೆದ ಎಲ್ಲಾ ಚಿತ್ರಗಳನ್ನೂ ಪ್ರಕಟಿಸಿಲ್ಲ. ಆಸಕ್ತಿಯುಳ್ಳವರು ಅವರ ಇಮೇಲ್ ವಿಳಾಸ ತಿಳಿಸಿದರೆ ಅವರಿಗೆ ಎಲ್ಲಾ ಚಿತ್ರಗಳನ್ನೂ ಇಮೇಲ್ ಮಾಡುತ್ತೇನೆ.
ಆದಾಗ್ಯೂ ನನ್ನ ಲೇಖನದ ಬಗ್ಗೆ ಆಸಕ್ತಿ ತೋರಿರುವ ಸಂಪದದ ಓದುಗರಿಗೆ ಧನ್ಯವಾದಗಳು. ಕುಂತಿದೇವಿಯ ಚಿತ್ರವನ್ನು ಈಕೂಡ ಲಗತ್ತಿಸಿರುತ್ತೇನೆ
ಎ.ವಿ. ನಾಗರಾಜು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಹಾಸನ ಜಿಲ್ಲೆಯ ಕುಂತಿಗುಡ್ಡದ ಬಗ್ಗೆ ನಾನು ಬರೆದ ಲೇಖನದ ವಿಷಯವಾಗಿ