ಹಾಸ್ಟೇಲ ಗರ್ಲ್ಸ..
ಹಾಸ್ಟೇಲನಲ್ಲಿರುವ ಹುಡುಗಿಯರಿಗೆ ಹಗಲಾಗಲಿ ಇರುಳಾಗಲಿ ಕನಸು ಕಾಣುವ ಹಂಬಲವಿರುತ್ತದೆ. ಒಬ್ಬರೆ ಕುಳಿತರು ನಗುವರು, ಮಾತನಾಡುವರು,ನಾಚುವರು ಮತ್ತು ಭಾವನೆಗಳೊಂದಿಗೆ ಆಟವಾಡುವರು. ಯಾವ ಹೊತ್ತಿಗೆ ಯಾವ ಹುಡುಗ ಅವರ ಮನದಲ್ಲಿ ನೆಲೆಸುವನೊ ತಿಳಿಯದು. ಕಿಟಕಿಯಿಂದ ಬರುವ ತಂಗಾಳಿಯು ಪ್ರತಿ ಕ್ಷಣಕೆ ಹೊಸ ಬಯಕೆ ಹೊತ್ತು ತರುವುದೋ? ಹೊಸ ಪ್ರೀತಿ ಮಾತು ಆಲಿಸಿವುದೊ? ಕಾಣಲಾರೆವು.
ಸ್ನೇಹ- ಪ್ರೀತಿ ತುಂಬಿದ ಭಾವನೆಗಳ ಸುಂಟರಗಾಳಿ ಆ ಹುಡುಗಿಯರನ್ನು ಮುತ್ತಿ ಬಿಟ್ಟಿರುತ್ತದೆ. ಅವರ ಆತ್ಮೀಯವಾದ ಗೋಡೆಗಳು ಪ್ರೀತಿ ಮಾತುಗಳಿಗೆ ಸ್ಪಂದಿಸುವವು.
ತಮ್ಮೆಲ್ಲ ಭಾವನೆಗಳನ್ನು, ಕದ್ದು ನೋಡಲು, ಸುಖ ದುಃಖದ ಗಳಿಗೆಯನ್ನು ಹಂಚಿಕೊಳಲು ಬಂದಿರುವ ಅವರ ಜೀವದ ಗೆಳೆಯ ಸುಂದರವಾದ ಕನ್ನಡಿಯಾಗಿರುತ್ತದೆ.
ಯಾವ ಕ್ಷಣದಲ್ಲಿ ದಿಂಬನ್ನು ಅಪ್ಪಿ ಮುತ್ತು ನೀಡುವರೊ? ತಿಳಿಯದು. ಪ್ರತಿದಿನ ಮುಂಜಾನೆ ನಿದ್ದೆಯಿಂದ ಎದ್ದರೆ ಅವರು ಹೊಸ-ಹೊಸ ಕನಸುಗಳನ್ನು ಹೊತ್ತು ತರುವರು. ಆ ಕನಸನ್ನು ನನಸಾಗಿಸಲು ತಮ್ಮ ಮನೆಯವರ ಜೊತೆ ಕೋಪಗೊಳ್ಳುವರು. ಅಭ್ಯಾಸ ಮಾಡಲು ಕಡಿಮೆ ಸಮಯ ದೊರೆತರು ಬೇಜಾರಾಗದೆ ರೂಮಮೇಟ್ ಮತ್ತು ಉಳಿದ ಸ್ನೇಹಿತೆಯರ ಜೊತೆ ರಾತ್ರಿ ಒಂದು ಘಂಟೆಯವರೆಗೆ ಮುದ್ದಾದ ತುಂಟಾದ ಹರಟೆ ಹೊಡೆಯುವರು. ಕಾಲೇಜನಲ್ಲಿ ಧ್ಯಾನ ಕಡಿಮೆಯಾದರು ಪರವಾಗಿಲ್ಲ ಆದರೆ ಉಡುಪುಗಳ ಬಗ್ಗೆ ವಿಶೇಷ ಧ್ಯಾನ ನೀಡುವರು. ಕಾಲೇಜ್ ಬ್ಯಾಗ್ ಅಂತು ಕೇಳಲೆ ಬೇಡಿ ಗುಲಾಬಿ ,ಹಾರ್ಟು, ವರ್ಕ್ ಹೊಂದಿದ್ದು ಓದುವ ಪುಸ್ತಕಗಳಿಗಿಂತ ಹೆಚ್ಚೆ ಬೆಲೆ ಕೊಟ್ಟು ಬಳಸುತ್ತಾರೆ. ರೂಮ್ ಎಷ್ಟೆ ಚಿಕ್ಕದಾಗಿರಲಿ ಅಲ್ಲಿ ಟೆಡ್ಡಿ ಬೀಯರ್ ಇರಲೆಬೇಕು, ಮೆಸ್ ಊಟ ಬಿಟ್ಟರು ಪರವಾಗಿಲ್ಲ ಚೊಕೊಲೆಟ್ ರೂಮಲ್ಲಿ ಕಾಣಲೆಬೇಕು. ಪೆನ್ನಿಡುವ ಸ್ಟಾಂಡಲ್ಲಿ
ಪೆನ್ನು ಕಡಿಮೆ ಮೆಕ್ಅಪ್ ಪೆನ್ಸಿಲಗಳು ತುಂಬಿರತ್ತಾರೆ. ಇದೆಲ್ಲಾ ಬಿಟ್ಟು ತಾವೆ ಮಲಗುವ ಬೆಡ್ ಸೀಟಕವರ್ ಹೇಗಿರಬೇಕು ಅಂತಾ ಕೇಳಿದ್ರೆ ಹೇಳುವರು-
ಬಣ್ಣ ಬಣ್ಣದ ಚಿಟ್ಟೆಗಳು,ಕೆಂಪು ಹೃದಯಗಳು, ಹೂ ಹಾಸಿಗೆ, ಗೊಂಬೆಯ ಚಿತ್ರಗಳು ಹೊಂದಿರುವುದನ್ನು ಹತ್ತಾರು ಅಂಗಡಿಗಳನ್ನು ಸುತ್ತಿ ಹುಡುಕಿ ತರುವರು.
ಖಾಟಿನ ಪಕ್ಕದ ಗೋಡೆಗೆ ಅಥವಾ ಬಾಗಿಲಿನ ಹಿಂದೆ ತಾವು ಇಷ್ಟಪಡುವ ನಟನ ಪೋಸ್ಟರ್ ಅಂಟಿಸಿರುತ್ತಾರೆ. ಅದರ ಮೇಲೆ ಇವರ ಮನಸ್ಸು ಮುನಿದಾಗ
ತುಟಿಗಳ ಚಾಪಣಿ ಮೂಡಿಸಿರುತ್ತಾರೆ. ಈ ಹಾಸ್ಟೇಲ್ ಹುಡುಗಿಯರೆ ಹೀಗೆ ಃ
ಬಣ್ಣ ಬಣ್ಣದ ಬೆಡಗಿಯರು, ಅವರ ಮಿಂಚುವ ಕಣ್ಣುಗಳು, ಕೆಂಗುಲಾಬಿ ತುಟಿಗಳು, ಕಿವಿ ಓಲೆಗಳು, ಸಾನಿಯಾ ಮೂಗುತಿಗಳು,ಸಣ್ಣಸೊಂಟಗಳು, ಕಲರ್ ಫುಲ್ ಬಿಂದಿಗಳು, ಬ್ರಾಂಡೆಡ್ ಲಿಪಸ್ಟಿಕಗಳು, ಮೇಕಪ್ ಬಾಕ್ಸಗಳು, ಘಮ್ಮೆನ್ನುವ ಸೆಂಟುಗಳು,ಫ್ಯಾನ್ಸಿ ಡ್ರೆಸ್ಸುಗಳು, ಮ್ಯಾಚಿಂಗ್ ಚಪ್ಪಲಗಳು, ಖಾಲಿ ಪರ್ಸುಗಳು, ಚಿಕ್ಕ ಬ್ಯಾಗುಗಳು, ಮೆಲ್ಲಗಿಡುವ ಕ್ಯಾಟ್ ವಾಕಗಳು, ಚೆಂದದ ಗೊಂಬೆಗಳು, ಬಾಯ್ ಫ್ರೆಂಡ್ನ್ ಗಿಫ್ಟುಗಳು,
ವಿವಿಧ ಚೊಕೊಲೇಟಗಳು, ಮಲಗುವ ಬೇಡಸೀಟಗಳು, ಅಪ್ಪಲು ದಿಂಬುಗಳು,ಮಸ್ತ ನೈಟಿಗಳು, ಕದ್ದ ಕನಸುಗಳು, ಹ್ರದಯವಂತ ಪೋರಗಳು, ಸ್ನೇಹಿಸುವ ಚಿಹ್ನೆಗಳು,
ಪ್ರೀತಿಸುವ ಪರಿಗಳು, ವಿಚಿತ್ರ ವಿಚಾರಗಳು,ಸಹಾಯದ ಸ್ನೇಹಿತೆಗಳು, ಹೊಸ ಬಯಕೆಗಳು, ಹಳೆ ನೆನಪುಗಳು.
ಹೀಗೆ ಹಾಸ್ಟೇಲ್ ಹುಡುಗಿಯರ ಲೈಫು ಇಷ್ಟೇನೆ. ಇವರ ಪಾಲಿಸುವ ಚಿನ್ನದಂತಾಮಾತು ಕೇಳಿರಿಃ
ನಕ್ಕು ನಲಿಯಿರಿ
ಕನಸು ಕಾಣಿರಿ
ಸ್ನೇಹ ಬೆಳೆಸಿರಿ
ಪ್ರೀತಿ ಮಾಡಿರಿ
ಮನೆಯವರಿಗೆ ಕೈ ಕೊಟ್ಟು ಹುಡುಗನ ಜೊತೆ ಓಡಿ ಹೋಗಿರಿ
ಮದುವೆ ಆಗಿರಿ
ಮಕ್ಕಳು ಹಡೆಯಿರಿ
ಜಗಳ ಆಡಿರಿ
ಮಕ್ಕಳನ್ನು ಹಾಸ್ಟೇಲ ಸೇರಿಸಿರಿ
ಆ ಮಕ್ಕಳು ಓಡಿ ಹೋದಾಗ ಬುಧ್ಧಿ ಕಲಿಯಿರಿ.....
{ಈ ಮಾತುಗಳನ್ನು ಯಾವುದೆ ಹುಡುಗಿಯರು ಅಪರ್ಥ ಮಾಡಿಕೊಳ್ಳಬಾರದು. ಹಾಗೆ ಸುಮ್ಮನೆ ಸ್ವಲ್ಪ ಕಹಿ ಸತ್ಯಗಳನ್ನು ಬರೆದಿರುವ ಪಿಸುಮಾತಿದು.. ಎಲ್ಲ ಹುಡುಗಿಯರು ಈ ತರಹ ಇರುವುದಿಲ್ಲ. ಒಂದು ಹಾಸ್ಟೇಲನಲ್ಲಿ ಒಬ್ಬರು ಹೀಗೆ ಇರುತ್ತಾರೆ ಓಕೆ ಃ ) }
Comments
ಉ: ಹಾಸ್ಟೇಲ ಗರ್ಲ್ಸ..
In reply to ಉ: ಹಾಸ್ಟೇಲ ಗರ್ಲ್ಸ.. by kamath_kumble
ಉ: ಹಾಸ್ಟೇಲ ಗರ್ಲ್ಸ..
ಉ: ಹಾಸ್ಟೇಲ ಗರ್ಲ್ಸ..
In reply to ಉ: ಹಾಸ್ಟೇಲ ಗರ್ಲ್ಸ.. by c.hareesha
ಉ: ಹಾಸ್ಟೇಲ ಗರ್ಲ್ಸ..
ಉ: ಹಾಸ್ಟೇಲ ಗರ್ಲ್ಸ..
In reply to ಉ: ಹಾಸ್ಟೇಲ ಗರ್ಲ್ಸ.. by sada samartha
ಉ: ಹಾಸ್ಟೇಲ ಗರ್ಲ್ಸ..