ಹಾ, ಇವುಗಳ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿತ್ತು ಅಷ್ಟೆ,!

ಹಾ, ಇವುಗಳ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿತ್ತು ಅಷ್ಟೆ,!

ಬರಹ

೧. ಪ್ರೆಸಿಡೆಂಟ್ ಲಿಂಡನ್ ಬಿ. ಜಾನ್ಸನ್ ರವರು, ದ. ಟೆಕ್ಸಾಸ್ ನಲ್ಲಿ, ಪುಟ್ಟ ಸ್ಕೂಲ್ ನಲ್ಲಿ, ಶಿಕ್ಷಕರಾಗಿದ್ದರು.

೨. ಪ್ರೆಸಿಡೆಂಟ್ ವುಡ್ರೋ ವಿಲ್ಸನ್, 'ಪ್ರಿನ್ಸ್ ಟನ್ ಯೂನಿವರ್ಸಿಟಿ' ಯ ಅಧ್ಯಕ್ಷರಾಗಿದ್ದರು.

೩. ಪ್ರೆಸಿಡೆಂಟ್ ಜೇಮ್ಸ್ ಗಾರ್ಫೀಲ್ದ್, ಅಧ್ಯಕ್ಷರಾಗುವ ಮೊದಲು, ಪ್ರೀಚರ್ ಆಗಿದ್ದರು.

೪. ಪ್ರೆಸಿಡೆಂಟ್ ವಿಲಿಯಮ್ ಹೊವಾರ್ಡ್ ಟ್ಯಾಫ್ಟ್, ’ಚೀಫ್ ಜಸ್ಟೀಸ್ ಆಫ್ ಸುಪ್ರೀಮ್ ಕೋರ್ಟ್,” ಆಗಿ ಕಾರ್ಯನಿರ್ವಹಿಸಿದರು.

೫. ಪ್ರೆಸಿಡೆಂಟ್ ಜಾನ್ ಎಫ್. ಕೆನೆಡಿ, ೧೯೫೭ ರಲ್ಲಿ ತಮ್ಮ ಪ್ರಬಂಧ ಸಂಗ್ರಹ, " "Profiles in Courage " ಕ್ಕೆ ಬಹುಮಾನ್ಯ, ಪುಲಿತ್ಜರ್ (pulitzar)ಪ್ರಶಸ್ತಿ " ಗಳಿಸಿದ್ದರು.

೬. ಪ್ರೆಸಿಡೆಂಟ್, ಜಾರ್ಜ್ ವಾಶಿಂಗ್ಟನ್, ಮತ್ತು ಪ್ರೆಸಿಡೆಂಟ್, ಜಿಮ್ಮಿ ಕಾರ್ಟರ್, ರೈತರಪರಿವಾರದಿಂದ ಬಂದವರು. ಪ್ರೆಸಿಡೆಂಟ್ ವಾಷಿಂಟನ್ ರವರ, ಮೌಂಟ್ ವರ್ನನ್ ನ ಮನೆಯಲ್ಲಿದ್ದಾಗ ಪ್ಲಾಂಟರ್ ಹಾಗೂ ಕೃಷಿಕರಾಗಿ ಕೆಲಸಮಾಡಿದ್ದರು. ಜಿಮ್ಮಿ ಕಾರ್ಟರ್ ರವರಿಗೆ, ಜಾರ್ಜಿಯಾದಲ್ಲಿ, ಕಡಲೆಕಾಯಿನ ಹೊಲವಿತ್ತು.

೭. ಪ್ರೆಸಿಡೆಂಟ್, ಬರಕ್ ಓಬಮ, ಯು. ಎಸ್. ಪ್ರೆಸಿಡೆಂಟ್ ಆಗುವ ಮೊದಲು, ಇಲಿನಾಯ್ ನ ಸೆನೆಟರ್, ಆಗಿದ್ದರು ಮತ್ತು ಚಿಕಾಗೊ ನಗರದಲ್ಲಿ ’ಕಮ್ಯುನಿಟಿ ಆರ್ಗನೈಸರ್ ’ ಆಗಿ, ಕೆಲಸ ನಿರ್ವಹಿಸುತ್ತಿದ್ದರು.

೮. ಅಮೆರಿಕದ ಅಧ್ಯಕ್ಷರ ಆಫೀಸ್ ಗೆ 'ಓವಲ್' ಎನ್ನುತ್ತಾರೆ. ಅವರು ಹಾರಲು ಉಪಯೋಗಿಸುವ ಯಾವುದೇ ವಿಮಾನಕ್ಕೆ, ಏರ್ಫೋರ್ಸ್-೧ ಎನ್ನುವರು. ಅವರ ಬಳಕೆಯ ಹೆಲಿಕಾಪ್ಟರಿಗೆ, ಮೆರಿನ್-೧ ಯೆಂದು ಹೆಸರು.

೯. ಪ್ರೆಸಿಡೆಂಟ್, ಎಸ್. ಹ್ಯಾರಿ. ಟ್ರೂಮನ್ ರವರ ಹೆಸರಿನಲ್ಲಿರುವ ಎಸ್ ಅಕ್ಷರ, ಅವರ ಅಜ್ಜಂದಿರಿಬ್ಬರ ಹೆಸರನ್ನು ಸೂಚಿಸುತ್ತದೆ. ಆಂಡರ್ ಸನ್ ಶಿಪೆ ಟ್ರೂಮನ್ , ಮತ್ತು ಸಾಲೋಮನ್ ಯಂಗ್, ಅಕ್ಷರ ಅವರಿಬ್ಬರಿಗೂ ಗೌರವ ಸೂಚಿಸುತ್ತದೆ.

೧೦. ಅಮೆರಿಕದ ಫಿಲಡೆಲ್ಫಿಯ ನಗರದಲ್ಲಿ ಪ್ರಪ್ರಥಮವಾಗಿ,ಸ್ವಾತಂತ್ರ್ಯದ ಘೋಷಣೆಯನ್ನು, ಸಾರ್ವಜನಿಕವಾಗಿ, ಮಾಡಲಾಯಿತು. ಈಗಲೂ ಅಲ್ಲಿರುವ ದೊಡ್ಡ ಗಂಟೆಗೆ, ’ಲಿಬರ್ಟಿ ಬೆಲ್ ’ ಎನ್ನುತ್ತಾರೆ. ಅದು ಜುಲೈ, ೮, ೧೭೭೬. ರಂದು, ಪ್ರತಿಧ್ವನಿಸಿದಾಗ ಗಂಟೆಯಕರೆಯಿಂದ ಎಲ್ಲ ನಾಗರೀಕರೂ ಒಂದೆಡೆ ಸಮಾವೇಷಗೊಂಡಿದ್ದರು. ’ಘಂಟಾನಾದ, ” ’ಎಲ್ಲರೂ ಬನ್ನಿ ಒಟ್ಟುಗೂಡಿ, ನಾವೆಲ್ಲಾ ಒಟ್ಟಾಗಿ ಕೆಲಸಮಾಡೋಣ,” ವೆಂಬ ಅರ್ಥವನ್ನು ಸೂಚಿಸುತ್ತದೆ.

೧೧. ಜುಲೈ, ೯, ೧೭೭೬, ಜನರಲ್ ಜಾರ್ಜ್ ವಾಶಿಂಗ್ಟನ್ ಒಂದು ಆಜ್ಞೆಯನ್ನು ಹೊರಡಿಸಿ, ಸ್ವಾತಂತ್ರ್ಯಘೋಷಣೆಯನ್ನು ಅಮೆರಿಕದ ಸೈನ್ಯದ ಎದುರು, ಓದಲು, ಮನವಿಮಾಡಿಕೊಂಡರು.

೧೨. ೧೮೦೦ ರಲ್ಲಿ, ಓಡಿಹೋದ ೩೦೦ ಒತ್ತೆಯಾಳುಗಳಿಗೆ ಸ್ವಾತಂತ್ರ್ಯಕೊಡುವಂತೆ, ಅವರ ನಾಯಕ, ಹ್ಯಾರಿಯೆಟ್ ಟುಬ್ಮನ್, ಹೋರಾಟಮಾಡಿ, ಸಹಾಯಮಾಡಿದ. ೧೮೩೧, ರಲ್ಲಿ ಈ ಸಂಘಟನೆಗೆ, ’ಅಂಡರ್ ಗ್ರೌಂಡ್ ರೇಲ್ ರೋಡ್ ’ ವೆಂಬ ಹೆಸರು ಬಂತು.

೧೩. 'ಸ್ಟ್ಯಾಚ್ಯು ಆಫ್ ಲಿಬರ್ಟಿ' ಯ ಬೃಹತ್ ವಿಗ್ರಹ, ಫ್ರಾನ್ಸ್ ದೇಶದ ಕೊಡುಗೆ. ಅಮೆರಿಕ ಹಾಗೂ ಫ್ರಾನ್ಸ್ ದೇಶಗಳ ನಡುವಿನ ಉತ್ತಮ ಸಂಬಂಧದ ಪ್ರತೀಕವಾಗಿ ಸ್ಥಾಪಿಸಲ್ಪಟ್ಟಿದೆ.

.
೧೪. ಪ್ರೆಸಿಡೆಂಟ್ ಅಬ್ರಾಹಂ ಲಿಂಕನ್, ತಮ್ಮ ಇಡೀ ಜೀವಮಾನದಲ್ಲಿ ಗಳಿಸಿದ್ದು, ಕೇವಲ ಒಂದು ಮನೆಮಾತ್ರ. ಅವರು ಇಲಿನಾಯ್ ರಾಜ್ಯದ ’ಸ್ಪ್ರಿಂಗ್ ಫೀಲ್ಡ್ ’ ನಲ್ಲಿ, ವಾಸವಾಗಿದ್ದರು.

೧೫. ಪ್ರೆಸಿಡೆಂಟ್, ಜೆಫರ್ಸನ್, ಸುಮಾರು ೪೦ ವರ್ಷಕ್ಕಿಂತ ಹೆಚ್ಚು ಸಮಯವನ್ನು ತಮ್ಮ ಮನೆಯನ್ನು ಹೇಗೆ ನಿರ್ಮಿಸಬೇಕೆನ್ನುವ ತಳಮಳದಲ್ಲೇ ಕಳೆದರು. Charlottesville, VA ಯ ಮನೆಗೆ, Monticello, ಎಂಬ ಹೆಸರು. ಪ್ರೆಸಿಡೆಂಟ್ ಕ್ಲಾಸಿಕಲ್ ಆರ್ಕಿಟೆಕ್ಚರ್ ನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಅದೇ ಶೈಲಿಯನ್ನು ತಮ್ಮ ಮನೆಗೆ ಅಳವಡಿಸಿದ್ದರು.

೧೬. ಪ್ರೆಸಿಡೆಂಟ್ ಜ್ಯಾಕ್ಸನ್ ರ ಎಸ್ಟೇಟ್, ’ ನಾಶ್ವಿಲ್ಲೆ ’ ಮನೆಯ ಟೀ. ಎನ್.ಗೆ, ’ ಹರ್ಮಿಟೇಜ್ ’ ಎಂದು ಕರೆಯಲಾಗಿತ್ತು.

೧೭. ಪ್ರೆಸಿಡೆಂಟ್ ರಿಚರ್ಡ್ ಎಮ್. ನಿಕ್ಸನ್ ರನ್ನು ಮೇಜರ್ ಲೀಗ್ ಬ್ಯಾಸ್ಕೆಟ್ ಬಾಲ್ ಆಟಗಾರರ ಪ್ರತಿನಿಧಿಯಾಗಿ ೧೯೬೫ ರಲ್ಲಿ ಘೋಷಿಸಿದರು. ಆದರೆ, ರಾಜಕೀಯದಲ್ಲಿ ಅವರಿಗೆ ಆಸಕ್ತಿಯಿದ್ದಿದ್ದರಿಂದ ಆಟವಾಡಲಿಲ್ಲ. ನಿಕ್ಸನ್, ೧೯೬೯ -೧೯೭೪ ರ ವರೆಗೆ, ಅಮೆರಿಕದ ಪ್ರೆಸಿಡೆಂಟ್ ಆಗಿದ್ದರು.

೧೮. ಪ್ರೆಸಿಡೆಂಟ್, , ಜಾರ್ಜ್ ಎಚ್, ಡಬ್ಲ್ಯೂ ಬುಶ್, ಪ್ರಥಮ ಬೇಸ್ ಬಾಲ್ ಆಟವನ್ನು ’ಯೇಲ್ ವಿಶ್ವವಿದ್ಯಾಲಯ ’ ದ ಆಟಗಾರರ ಟೀಮಿನಜೊತೆಯಲ್ಲಿ ಆಡಿದ್ದರು. ಎರೆಡುಬಾರಿ, ’ಕಾಲೇಜ್ ನ ವರ್ಲ್ದ್ ಸೀರೀಸ್ ’ ನಲ್ಲಿ ಫೈನಲ್ಸ್ ತಲುಪಿದ್ದರು.

೧೯. ಪ್ರೆಸಿಡೆಂಟ್ ಕಲ್ವಿನ್ ಕೂಲಿಡ್ಜ್ ರ ಪತ್ನಿ, ಗೇಸ್ ಕೂಲಿಡ್ಜ್ ಬೇಸ್ಬಾಲ್ ಆಟವಾಡುವ ಸಮಯದಲ್ಲಿ, ಪ್ರೆಸಿಡೆಂಟ್ ರ ಬಾಕ್ಸ್ ನಲ್ಲಿ ಕುಳಿತೇ ಆಟದ ಸ್ಕೋರ್ ಗಳನ್ನು ಸರಿಯಾಗಿ ಲೆಕ್ಕವಿಡುವ ಕೆಲಸವನ್ನು ನಿರ್ವಹಿಸುತ್ತಿದ್ದರು.

೨೦. ೧೯೧೫, ರಲ್ಲಿ ಪ್ರೆಸಿಡೆಂಟ್, ವುಡ್ರೊವ್ ವಿಲ್ಸನ್ World Series ಆಟಕ್ಕೆ ಪ್ರಥಮ ಪ್ರೆಸಿಡೆಂಟ್ ಆದರು. ಅವರು ಮತ್ತು ಅವರ ಫಿಯಾನ್ಸ್ ’ ಎಡಿತ್ ಗಾಲ್ಟ್,” ಮದುವೆಯ ನಿಶ್ಚಿತಾರ್ಥದನಂತರ, ಎಲ್ಲರಮುಂದೆ ಬಂದು, ಆ ಆಟದ ಗ್ರೌಂಡ್ ನಲ್ಲಿ ಕಾಣಿಸಿಕೊಂಡರು. ಆಗ, ಪ್ರೆಸಿಡೆಂಟ್ ತಮ್ಮ ಟಿಕೆಟ್ ಗೆ ತಾವೇ ಹಣಕೊಡುವುದಾಗಿ ಕರೆಕೊಟ್ಟರು.

೨೧. ೧೭೮೭,ರಲ್ಲಿ ಬ್ರಿಟನ್ ಜೊತೆಗೆ, ಯುದ್ಧ ಸಮಾಪ್ತವಾದ ೪ ವರ್ಷಗಳ ನಂತರ, ೫೫ ಜನ ಡೆಲಿಗೇಟ್ ಗಳು, ಸಾಮೂಹಿಕವಾಗಿ, ಫಿಲಡೆಲ್ಫಿಯದಲ್ಲಿ ಸಮಾಲೋಚನೆಮಾಡಿದ, ’ ಆರ್ಟಿಕಲ್ಸ್ ಆಫ್ ಕಾನ್ಫೆಡರೇಶನ್,” ಕಾರ್ಯಕ್ರೆಮಗಳು ಕ್ರಮೇಣ, ಸಂವಿಧಾನದ ಸಮಾರಂಭ ರಚನೆಗೆ ದಾರಿಯಾಯಿತು. ಅಮೆರಿಕದ ಸಂವಿಧಾನದ ಸಹಿ, ಸೆಪ್ಟೆಂಬರ್ ೧೭, ೧೭೮೭, ರಲ್ಲಿ ಹಾಕಲಾಯಿತು.

೨೨. ಡಿಸೆಂಬರ್, ೭, ೧೭೮೭,’ ಡೆಲವೇರ್ ರಾಜ್ಯ” ಸಂವಿಧಾನವನ್ನು ಒಪ್ಪಿಕೊಂಡ ಪ್ರಥಮ ರಾಜ್ಯವೆಂದು ಪರಿಗಣಿಸಲ್ಪಟ್ಟಿತು.

೨೩. ಏಪ್ರಿಲ್ ೬, ೧೭೮೯, ರಲ್ಲಿ ಹೊಸ ಸಂವಿಧಾನದ ಪ್ರಕಾರ, ಕಾಂಗ್ರೆಸ್ ನ ಮೊದಲ ಕಾರ್ಯವಿಧಿ ಶುರುವಾಗಿತ್ತು. ಅದೇ ದಿನ, ಕಾಂಗ್ರೆಸ್ ನ ಸದಸ್ಯರು, ಮತದಾರರ ಓಟನ್ನು ಎಣಿಸಿದ್ದರು. ’ ಜಾರ್ಜ್ ವಾಷಿಂಟನ್ ’ ರನ್ನು ರಾಷ್ಟ್ರದ ಪ್ರಥಮ ರಾಷ್ಟ್ರಪತಿಯಾಗಿ ಚುನಾಯಿಸಿದ್ದರು.

೨೪. ಸಂವಿಧಾನದ ತಿದ್ದುಪಡಿಮಾಡಿ, ಅದು ಕಾನೂನಾಗಲು, ಮುಖ್ಖಾಲುಪಾಲು ರಾಜ್ಯಗಳು, ಅದರ ಪರವಾಗಿ ಮತ ಚಲಾಯಿಸಬೇಕು.

-ವೈಟ್ ಹೌಸ್. ಕಾಂ, ಸೈಟ್ ನ ಸೌಜನ್ಯದಿಂದ.