ಹಾ. ಮ. ಸತೀಶ್ ಅವರ ಕವನ, ಹಾಯ್ಕು ಇತ್ಯಾದಿ..
ವಿಮರ್ಶೆ ಮತ್ತು ನಾವು
ವಿಮರ್ಶೆ ಮನುಷ್ಯನನ್ನು
ಬದುಕಿಸಲಿ ಸಾಯಿಸಬಾರದು
ಬರಹಗಾರರನ್ನು ಉತ್ತೇಜಿಸಲಿ
ಹೊರತು ಅಳಿಸಬಾರದು
ಹೊಸ ಹರೆಯದವರಲ್ಲಿ
ಕನಸನ್ನು ಅರಳಿಸಲಿ
ಹೊಸಕಿ ಹಾಕಬಾರದು
ಬದುಕಿನ ಹೊಂಗನಸು
ಕಟ್ಟಿಕೊಂಡವರ ಉಳಿಸಲಿ
ಹೊರತು ತುಳಿಯಬಾರದು
ವಿಮರ್ಶೆ ವಿಮರ್ಶೆಯಾಗೇ ಇರಲಿ
ಹೊರತು ಸ್ವ- ವಿಮರ್ಶೆಯಾಗದಿರಲಿ
******
ಒಡಪು
ನನ್ನ ಎತ್ತಿ ಎತ್ತಿ ಒಗೀತಿಯಲ್ಲೆ
ಮದುವೆ ಆದ್ದು ತಿಳೀತು ಮಲ್ಲೆ
ಸಾಧಿಸೋದು ಅಂತೇಳ್ತೀಯಲ್ಲೆ
ಸವಿತಾ ಅಂತಾ ನಿನ್ನ ಕರಿತಾರಲ್ಲೆ
******
ಹಾಯ್ಕುಗಳು
೧. ಮೌನವಿರುವ
ಮಾನಿನಿಯರ ಮಾನ
ಹರಾಜಾಯಿತು !
೨. ಮಾನಿನಿಯರೂ
ತಾವೂ ಗಂಡಸರೆಂದು
ತೋರಿಸಿದರು !
೩. ಮಾನಿನಿಯರ
ಸಂಗ , ಅಭಿಮಾನವೂ
ಭಂಗವಾಯಿತು !
೪. ಮೌನಿಗಳಾದ
ಮಾನಿನಿಯರು ಭಲೇ
ಬುದ್ಧಿವಂತರು !
******
ಹನಿ ದ್ವಿಪದಿಗಳು
೧. ಪೂರ್ಣಗಳೆಂದೂ
ಅಪೂರ್ಣಗಳಾಗಬಾರದು !
೨. ನಲುಮೆ
ಒಲುಮೆಯಾಗಲಿ !
೩. ಪ್ರೀತಿಯೆಂದರೆ
ಎದೆ ಬಡಿತ !
೪. ಸವಿಯೆಂದರೆ
ಹಲಸಿನ ಸೊಳೆ !
******
ಕತೆಯೊಂದು ವ್ಯಥೆ ಹಲವು
ಕತೆ ಕತೆಯೆ ಹೆಣೆದರು ವ್ಯಥೆಯಾಯಿತು
ಕೊತ ಕೊತನೆ ಕುದಿದರು ಚಿತೆಯಾಯಿತು
ದಿನ ದಿನವು ಹಾಡಿದರು ಕಹಿಯಾಯಿತು
ಜನ ಜನವು ಸೇರಿದರು ಕುರುಡಾಯಿತು
ಮಳೆ ಮಳೆಯು ಬಂದಿರಲು ಕೆಸರಾಯಿತು
ಗುಳೆ ಗುಳೆಯು ಹೊರಟಿರಲು ಹೊಲಸಾಯಿತು
ಸೆಳೆ ಸೆಳೆಯು ಕಂಡಿರಲು ಬಿಲವಾಯಿತು
ಕಳೆ ಕಳೆಯು ತುಂಬಿರಲು ಮುಳ್ಳಾಯಿತು
ಪರಿ ಪರಿಯ ಮಾತಿನಲು ಮುನಿಸಾಯಿತು
ಕಲೆ ಕಲೆಯ ಸೊಬಗಿನಲು ಸೋಲಾಯಿತು
ಕಿರಿ ಕಿರಿಯ ಮಂದೆಯಲು ಬಿಸಿಯಾಯಿತು
ಗರಿ ಗರಿಯ ಕಾವಿಯಲು ಹುಸಿಯಾಯಿತು
-ಹಾ ಮ ಸತೀಶ
