ಹಿಂಸೆಯ ಬದುಕು

ಹಿಂಸೆಯ ಬದುಕು

ಬರಹ

ಮುಂಬೈಯ ಲ್ಲಿ ಮತ್ತೆ ಉಗ್ರರ ಹಟಾತ್ತನೆ ಅಟ್ಟಹಾಸ ಮೆರೆದಿದೆ. ಎಷ್ಟೊಂದು ಜನ ಅಮಾಯಕರು ಪ್ರಾಣ ತೆತ್ತಿದ್ದಾರೆ. ಪೋಲೀಸರು ಗುಂಡಿಗೆ ಬಲಿಯಾಗಿದ್ದಾರೆ. ಇವೆಲ್ಲವನ್ನು ತಡೆಯುವುದು ಸಾಧ್ಯವೇ? ನುಗ್ಗಿಯೇ ನುಗ್ಗುತ್ತೇವೆ, ಕೊಂದೇ ಕೊಲ್ಲುತ್ತೇವೆ, ಹೇಗಾದರೂ ಸರಿ ಎಂತಾದರೂ ಸರಿ ನರಿ ನಾಯಿಗಳನ್ನು ಕೊಂದಂತೆ ಜನರನ್ನು ಕೊಲ್ಲುತ್ತೇವೆ - ಭಯ ಹುಟ್ಟಿಸುತ್ತೇವೆ - ಎಲ್ಲ ಧರ್ಮ ದೇವರಿಗಾಗಿ ಎನ್ನುವ ಹುಚ್ಚು ಕಲ್ಪನೆಗಳೇ ಕಟ್ಟಿಕೊಂಡ ಅಂಧ ಹೊಂತಕಾರಿಗಳನ್ನು ತಡೆಯುವುದು ತೀರ ಪ್ರಯಾಸದ್ದು. ಬೇರೆ ಬೆರೆ ಹೆಸರುಗಳಲ್ಲಿ, ಬೇರೆ ಬೇರೆ ಸಂಘಟನೆಗಳ ರೂಪದಲ್ಲಿ ಬೀಜಗಳು ಮೊಳೆಯತೊಡಗಿವೆ ಎನ್ನುವುದು ಅಧಿಕ ಆತಂಕಕ್ಕೆ ಒಡ್ಡುತ್ತಿದೆ.
ಇಂಥ ಆತಂಕವಾದದ ವಿರುದ್ಧ ನಮ್ಮ ಬದುಕಿನ ಹೋರಾಟ ಮುಂದುವರಿಯುವುದು ಅನಿವಾರ್ಯ. ಆಧುನಿಕ ಜೀವನದ ಬದುಕಿದು. ರೀತಿ ಇದು. ನಮ್ಮ ಜೀವನ ದಿನದಿಂದ ದಿನಕ್ಕೆ ಅಸಹನೀಯವಾಗತೊಡಗಿದೆ. ಹಿಂಸೆ ಮನೆಯ ಕೋಣೆ ಕೋಣೆಗಳಲ್ಲಿ ಟಿವಿ ಪರದೆ ಮೇಲೆ ಮೂಡುತ್ತ ಎಳೆಯ ಮಕ್ಕಳು ಕೂಡ ಜಡ್ಡುಗಟ್ಟತೊಡಗಿದ್ದಾರೆ.

ಧರ್ಮ, ರಾಷ್ಟ್ರಗಳ ಕಲ್ಪನೆಯೇ ಮನುಷ್ಯನಿಗೆ ಇರದಿದ್ದರೆ ಆಗುತ್ತಿತ್ತೇನೋ. ಎಲ್ಲ ಬಂದೂಕಿನ ನಳಿಗೆಯಿಂದ, ಹಿಂಸೆಯಿಂದಲೇ ಆಗುತ್ತದೆನ್ನುವುದು ಮನುಷ್ಯನಿಗೆ ರಕ್ಕದಲ್ಲಿ ಬಂದ ಹುಚ್ಹಿರಬೇಕು - ನಮ್ಮ ಇತಿಹಾಸಗಳೇ ಹೇಳುತ್ತವೆ.
ಆದರೆ ಇಂಥ ಆಕ್ರಮಣದಿಂದ ಜನರನ್ನು ತುಸು ಕಾಲ ಭಯ ಆತಂಕಕ್ಕೆ ಒಡ್ಡಬಹುದು. ಆದರೆ ಮತ್ತೆ ಮುಂಬಯಿ ಅಥವಾ ಮುಂಬಯಿಯಂಥ ಇನ್ಯಾವುದೇ ಭಾಗ ಪುಟಿದೇಳುತ್ತದೆ. ಇದು ಆ ಹೃದಯ ಹೀನ ಮಂದಿಗಳಿಗೇಕೆ ಅರ್ಥವಾಗುವುದಿಲ್ಲ? ಅಥವಾ ಅವರನ್ನು ಪರಿವರ್ತನೆ ಮಾಡುವುದಾದರೂ ಹೇಗೆ?
ಉಗ್ರವಾದ - ಎಲ್ಲೇ ಯಾವುದೇ ಹೆಸರಲ್ಲಿ ಬಂದರೂ ಅದನ್ನು ನಾವು ಖಂಡಿಸಬೇಕಾಗಿದೆ. ಇಂಥ ಖಂಡನೆಗಳು ಕೂಡ ಹೋರಾಟದ ಭಾಗವೇ.

ರಾಧಾಕೃಷ್ಣ