ಹಿಡಿದಿರು ಕರವನು...
ಕವನ
ಅಡಿಯನು ಮೆಲ್ಲಗೆ ಇಡುತಿರು ಪ್ರಿಯತಮೆ
ದಡವದು ಕೊಂಚ ದೂರವಿದೆ
ಹಿಡಿದಿರು ಕರವನು ಬಿಡೆ ನಾ ಜಾರಲು
ಕೊಡುವೆನು ವಚನ ನಾ ನಿನಗೆ
ಬಾಳಿನ ಪಯಣದಿ ಬೀಳದೆ ಸಾಗಲು
ಜೋಳಿಗೆ ತುಂಬ ಪ್ರೀತಿಯಿದೆ
ತಾಳುವ ಭಾವವು ಬಾಳಿಗೆ ಬೇಕಿದೆ
ತೋಳನು ಚಾಚಿ ನಿಂತಿರುವೆ
ಒಪ್ಪದಿ ಬಾಚಿದ ಕಪ್ಪಿನ ಕೂದಲು
ತಪ್ಪಿಸಿಕೊಂಡ ಮುಂಗುರುಳು
ಒಪ್ಪಿದ ಮನಗಳು ತಪ್ಪದೆ ಬೆರೆವವು
ತುಪ್ಪದ ಸವಿಯು ಪ್ರೇಮದೊಳು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ವಾಟ್ಸಾಪ್)
ಚಿತ್ರ್
