ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!

ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!

Comments

Submitted by kavinagaraj Fri, 08/02/2013 - 10:29

ವಿಶ್ವಮಾನವತಾವಾದಿಯೆಂದು ಹೆಸರು ಪಡೆದಿದ್ದ ಕುವೆಂಪುರವರಲ್ಲಿ ಬ್ರಾಹ್ಮಣದ್ವೇಷಭಾವನೆ ಸುಪ್ತವಾಗಿದ್ದು ಆಗೊಮ್ಮೆ ಈಗೊಮ್ಮೆ ಹೊರಬರುತ್ತಿತ್ತು. ಬೊಮ್ಮನಹಳ್ಳಿಯ ಕಿಂದರಿಜೋಗಿ ಪದ್ಯದಲ್ಲಿ 'ಸುಬ್ಬಾಶಾಸ್ತ್ರಿಯ ಜನಿವಾರ, ಇಲಿಗಳಿಗಾಗಿತ್ತಾಹಾರ' ಎಂಬ ಸಾಲು ಒಂದು ಉದಾಹರಣೆಯಷ್ಟೆ. ಬ್ರಾಹ್ಮಣರು ಮಾನವರಲ್ಲ, ಬ್ರಾಹ್ಮಣೇತರರು ಮಾತ್ರ ಮಾನವರು ಎಂದಾದರೆ ವಿಶ್ವಮಾನವತೆ ಎಂಬುದಕ್ಕೆ ಬೇರೆ ಅರ್ಥ ಹುಡುಕಬೇಕಾಗುತ್ತದೆ. ಬ್ರಾಹ್ಮಣ, ಬ್ರಾಹ್ಮಣೇತರ ಎಂಬುದರಲ್ಲೇ ತಾರತಮ್ಯಭಾವವಿದೆ, ಈ ಪದವನ್ನು ಬ್ರಾಹ್ಮಣ/ಬ್ರಾಹ್ಮಣೇತರ -ಯಾರೇ ಉಪಯೋಗಿಸಲಿ.
 

Submitted by ರಾಮಕುಮಾರ್ Tue, 08/13/2013 - 11:13

In reply to by kavinagaraj

ಕುವೆಂಪುರವರಲ್ಲಿ ಬ್ರಾಹ್ಮಣದ್ವೇಷಭಾವನೆಯಿತ್ತು ಎನ್ನುವುದು ಸುಳ್ಳು ಆರೋಪ.ವಿವೇಕಾನಂದರ ವಿಚಾರಗಳಿಂದ ಪ್ರೇರಿತರಾಗಿದ್ದ ಅವರಿಗೆ ಪುರೋಹಿತಶಾಹಿಯ ಬಗ್ಗೆ, ಕಂದಾಚಾರಗಳ ಬಗ್ಗೆ ಸಕಾರಣವಾದ ಅಸಮಾಧಾನವಿತ್ತು.ಆದರೆ ಬ್ರಾಹ್ಮಣದ್ವೇಷವಿರಲ್ಲಿಲ್ಲ.ಅವರ ನಿಲುವು "ಶೂದ್ರತಪಸ್ವಿ" ನಾಟಕಕ್ಕೆ ಬಂದ ಟೀಕೆಗಳಿಗೆ ಉತ್ತರವಾಗಿ ಬರೆದ "ಮಾರ್ನುಡಿ"ಯಲ್ಲಿ ವ್ಯಕ್ತವಾಗಿದೆ.

http://kanaja.in/arc...

Submitted by Manjunatha D G Fri, 10/04/2013 - 19:08

ಕುವೆಂಪು ರವರು ಬ್ರಾಹ್ಮಣ್ಯದ‌ ಬಗ್ಗೆ ಅವಹೇಳನ‌ ಮಾಡಿದ್ದು ಬಹಳ‌ ಕಡಿಮೆ. ಕಂದಾಚಾರಗಳನ್ನ್ಫು ನಿಂದಿಸಿರಬಹುದು. ಆದರೆ ಈಗಿನ‌ ಬುದ್ದಿಜೀವಿಗಳಿಗೆ ಸಮಾಜ‌ ಸುದಾರಕರಿಗೆ ಬ್ರಾಹ್ಮಣ‌ ದ್ವೇಶಿತನ‌ ಒಂದು ಹವ್ಯಾಸ‌.. ಅಂತಹವರು ಕುವೆಂಪು ರವರಂತಹ‌ ಮಹಾನ್ ವ್ಯಕ್ತಿಗಳ‌ ಹೆಸರನ್ನು ಬಳಸಿ ಬ್ರಾಹ್ಮಣ್ಯದ‌ ಟೀಕೆ ಮಾಡುತ್ತಿರುತ್ತಾರೆ. ಶುದ್ದ‌ ಬ್ರಾಹ್ಮಣ್ಯವೂ ಕುವೆಂಪು ರವರಂತೆಯೇ ಇಡೀ ವಿಶ್ವದ‌ ಏಳಿಗೆಯನ್ನು ಸದಾ ಬಯಸುತ್ತದೆ. ಸರ್ವೇ ಜನಾಹ‌ ಸುಖಿನೋ ಬವಂತು ಎನ್ನುವುದು ವಿಶ್ವ‌ ಮಾನವ‌ ಸಂದೇಶದಂತೆಯೇ ಅಲ್ಲವೆ ?

ಬರಹ

ಕನ್ನಡ ನವೋದಯ ಸಾಹಿತ್ಯ ಕಾಲದಲ್ಲಿ  ಒ೦ದಷ್ಟು ಜಾತಿ ಅಸಮಾನತೆ ಬಗ್ಗೆ ಬರೆದರು ... ಇಲ್ಲೊ೦ದು ಮಾತು ... ಠೀಕೆ ಅ೦ತ ನಿ೦ತಾಗ ಕುವೆ೦ಪು ಏನು... ಕಾರ೦ತರಾದರೇನು??

 

ಹೀಗೊಮ್ಮೆ "ಕುಪ್ಪಳಿ"ಗೆ ಹೋಗಿದ್ದೆ  .  ಅಲ್ಲಿಯ      guest-house  ನ     ನೋಟಿಸ್ ಬೋರ್ಡಿನ ಮೇಲೆ ಒ೦ದಷ್ಟು ವಿಚಾರಗಳಿದ್ದವು. ಅವುಗಳಲ್ಲಿ ಒ೦ದು ವಿಷಯ ಕ೦ಡು ಬ೦ತು " ಈ ಮ೦ಟಪದಲ್ಲಿ ಮದುವೆ ಮು೦ಜಿ ಕಾರ್ಯಕ್ರಮಗಳು ನಡೆಯುವ೦ತಿಲ್ಲ, ಹಾಗೇನಾದರೂ ನಡೆದಲ್ಲಿ ಬ್ರಹ್ಮಣೇತರರು ಮಾತ್ರ ಜೋರಾಗಿ ಮ೦ತ್ರ ಉಚ್ಚರಿಸತಕ್ಕದ್ದು" ಎ೦ದು .ಹೀಗೆ ಹಲವಾರು ರೂಲ್ಸುಗಳು... ಆದರೆ ಕುಪ್ಪಳಿಯ ಅವರ ಮನೆಯಿ0ದ‌ ಹೊರಗೆ ಬರುವಾಗ ಅಲ್ಲೊ೦ದು ಬೋರ್ಡು  ಕಾಣಿಸಿತು "ಈ ತೋಟ ತಮ್ಮ‌  ಮನೆತನಕ್ಕೆ  ಸೇರಿರುವುದಾಗಿಯೂ, ಅಲ್ಲಿ ದೇವರ ಕಾವಲು ಇರುವುದಾಗಿಯೂ  ಬರೆದಿರುತ್ತದೆ"  exact  ಪದಗಳು

ನನಗೆ ನೆನಪಿಲ್ಲ‌...... .........................

 

ನಾನು ಹೇಳಿದ‌ ಈ ಮೇಲ್ಕ0ಡ‌ ಯಾವ‌  ವಿಚಾರವೂ ಕಾಲ್ಪನಿಕ ಅಲ್ಲ... ಅನುಮಾನ ಇದ್ದರೆ ಮತ್ತೊಮ್ಮೆ ಕುಪ್ಪಳ್ಳಿಗೆ ಭೇಟಿ ಕೊಡಿ.....................

 

ತಮ್ಮ ಕಾಲ ನ೦ತರ ಆದ ಅಪಭ್ರ೦ಶವೋ ಏನೋ ಗೊತ್ತಿಲ್ಲ .... ಕೆಲವಾರು ಬಾರಿ ಜನಗಳ ಮಾತು ಕ್ರುತಿಗಳು  ಹೊ೦ದಾಣಿಕೆ ಆಗೋಲ್ಲ ಅಲ್ವಾ???

 

ನಾನು ಹಿ೦ದು  fundamentalist   ಅಲ್ಲ, ಬ್ರಾಹ್ಮಣ್ಕೆಯ ಪಕ್ಷಪಾತಿಯೂ ಅಲ್ಲ....

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet