ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 6)

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 6)

೨೬.ಅತಿ ದೊಡ್ಡ ಆಫ್ರಿಕನ್ ಆನೆಯ ತೂಕ ಏಳು ಟನ್ ಇದ್ದೀತು. ಇದು ಈಗ ನೆಲದಲ್ಲಿ ವಾಸಿಸುವ ಅತ್ಯಂತ ದೊಡ್ಡ ಸಸ್ತನಿ. (ಅದೇನಿದ್ದರೂ ಈ ಆನೆಯ ತೂಕ ಈಗ ತಾನೇ ಹುಟ್ಟಿದ ನೀಲಿ-ವೇಲ್‌ನ ತೂಕಕ್ಕೆ ಸಮ.) ನೆಲದಲ್ಲಿ ವಾಸ ಮಾಡಿದ ಅತ್ಯಂತ ದೊಡ್ಡ ಸಸ್ತನಿ ದೈತ್ಯ ಖಡ್ಗಮೃಗ; ಅದೀಗ ನಿರ್ವಂಶವಾಗಿದೆ. ಅದರ ಎತ್ತರ (ಭುಜ ಮಟ್ಟದಲ್ಲಿ) ೧೮ ಅಡಿ, ಮತ್ತು ತೂಕ ಸುಮಾರು ೧೩.೫ ಟನ್. (ಆದರೆ, ಅದರ ತೂಕ ವಯಸ್ಕ ನೀಲಿ-ವೇಲ್‌ನ್ ತೂಕದ ಹತ್ತನೆಯ-ಒಂದು ಭಾಗಕ್ಕೆ ಸಮ.)

೨೭.ಕಾಡುಕೋಣಗಳ ಮಾರಣಹೋಮ: ೧೮೬೦ನೇ ದಶಕದ ಮಧ್ಯಭಾಗದಿಂದ ೧೮೮೩ರ ವರೆಗಿನ ಅವಧಿಯಲ್ಲಿ ಉತ್ತರ ಅಮೇರಿಕಾದಲ್ಲಿ ಕಾಡುಕೋಣಗಳ ಸಂಖ್ಯೆ ೧೩ ದಶಲಕ್ಷದಿಂದ ಸುಮಾರು ಐನೂರಕ್ಕೆ ಕುಸಿಯಿತು!

೨೮.”ಬಫೆಲೋ ಬಿಲ್” ಕೋಡಿ ಎಂಬ ವ್ಯಕ್ತಿ ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ೪,೮೬೨ ಕಾಡುಕೋಣಗಳನ್ನು ಕೊಂದೆನೆಂದು ಹೇಳಿಕೊಂಡಿದ್ದಾನೆ. ಇದೊಂದು ದಾಖಲೆ - ಮನುಷ್ಯನ ಕ್ರೂರತನದ ದಾಖಲೆ. ಆತ ಒಂದೇ ದಿನದಲ್ಲಿ ೬೯ ಕಾಡುಕೋಣಗಳನ್ನು ಕೊಂದು ಹಾಕಿದ್ದಾಗಿಯೂ ಜಂಭ ಕೊಚ್ಚಿಕೊಂಡಿದ್ದಾನೆ.

೨೯.ಆಗಷ್ಟೇ ಹುಟ್ಟಿದ ಪಾಂಡಾದ ತೂಕವೆಷ್ಟು ಗೊತ್ತೇ? ಸುಮಾರು ೧೧೩ ಗ್ರಾಮ್. ಅದು ಇಲಿಗಿಂತಲೂ ಸಣ್ಣದಾಗಿರುತ್ತದೆ.

೩೦.ಪ್ರಾಚೀನ ಈಜಿಪ್ಟಿನಲ್ಲಿ, ಹಮದ್ರ್ಯಾಸ್ ಬಬೂನ್‌ಗಳು (ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ವಾಸಿಸುವ, ನಾಯಿಯ ಮುಖವಿರುವ ದೊಡ್ಡ ಮಂಗ) ತೊತ್ ದೇವರ ಜೊತೆಗಾರರೆಂದು ನಂಬುತ್ತಿದ್ದರು. ಆದ್ದರಿಂದ ಅವು ಸತ್ತಾಗ ಅವನ್ನು ಮಮ್ಮಿಗಳಾಗಿ ರಕ್ಷಿಸುತ್ತಿದ್ದರು!

ಫೋಟೋ ೧ ಮತ್ತು ೨: ಪಾಂಡಾ ..... ಕೃಪೆ: ಡೆಪಾಸಿತಟ್ ಫೋಟೋಸ್.ಕೋಮ್

ಫೋಟೋ ೩: ಹಮದ್ರ್ಯಾಸ್ ಬಬೂನ್ ..... ಕೃಪೆ: ಸಾನ್ ಡೀಗೋ ಜೂ.ಆರ್ಗ್