ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 7)

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 7)

೪೧.ಆನೆಗಳಿಗೆ ಮತ್ತು ಚಿಕ್ಕ-ಬಾಲದ ಶ್ರೂಗಳಿಗೆ ದಿನಕ್ಕೆ ಕೇವಲ ಎರಡು ಗಂಟೆಗಳ ನಿದ್ದೆ ಸಾಕು; ಆದರೆ, ಗೊರಿಲ್ಲಾಗಳು ಮತ್ತು ಬೆಕ್ಕು ಜಾತಿಯ ಪ್ರಾಣಿಗಳಿಗೆ ದಿನಕ್ಕೆ ೧೪ ಗಂಟೆಗಳ ನಿದ್ದೆ ಬೇಕು. ಗಮನಿಸಿ: ಪ್ರಾಣಿಗಳ ನಿದ್ದೆಯ ಅಂತರ ೨ರಿಂದ ೧೪ ಗಂಟೆ.

೪೨.ನಮ್ಮ ಎಲ್ಲ ಸಾಕುಪ್ರಾಣಿಗಳನ್ನು ಪಳಗಿಸಿದವರು ನಮ್ಮ ಪೂರ್ವಿಕರು. ಕಳೆದ ೪,೦೦೦ ವರುಷಗಳಲ್ಲಿ ಯಾವುದೇ ಹೊಸಪ್ರಾಣಿಯನ್ನು “ಸಾಕುಪ್ರಾಣಿ"ಯಾಗಿ ಮನುಷ್ಯರು ಪಳಗಿಸಿಲ್ಲ.

೪೩.ಆರ್ಕಟಿಕ್ ಟುನ್‌ಡ್ರಾದ ಕಸ್ತೂರಿ ಎತ್ತು (ಮಸ್ಕ್ ಓಕ್ಸ್)ಗಳ ಉದ್ದನೆಯ ರೋಮಕವಚದ ಒಳಗಡೆ ಉಣ್ಣೆಯ ಕವಚವಿದೆ. ಇದು ಅತ್ಯುತ್ತಮ ಉಷ್ಣ ನಿರೋಧಕ. ಯಾಕೆಂದರೆ, ಕಸ್ತೂರಿ ಎತ್ತು ಅಥವಾ ದನ ಹಿಮದಲ್ಲಿ ಮಲಗಿದಾಗ, ಅದರ ದೇಹದ ಉಷ್ಣತೆಯಿಂದಾಗಿ ಅಲ್ಲಿನ ಹಿಮ ಕರಗುವುದಿಲ್ಲ!

೪೪.ಅಮೇರಿಕಾದಲ್ಲಿ ಮರಗಳಲ್ಲಿ ವಾಸ ಮಾಡುವ ಒಪಾಸಮ್‌ಗಳು ವಿಕಾಸ ಹೊಂದಿದ್ದು ೪೫ ಮಿಲಿಯ ವರುಷಗಳ ಮುಂಚೆ.

೪೫.ಆಸ್ಟ್ರೇಲಿಯಾದ ಕೋಲಾ ಕರಡಿಗಳು ಒಂದೇ ಒಂದು ಮರವನ್ನು ಅವಲಂಬಿಸಿ ಬದುಕುತ್ತವೆ - ಅದು ನೀಲಗಿರಿ ಮರ. ಅವುಗಳಿಗೆ ಬೇರೇನೂ ಬೇಕಾಗಿಲ್ಲ, ನೀರು ಕೂಡ ಬೇಕಾಗಿಲ್ಲ. ಈ ಭೂಮಿಯಲ್ಲಿ ಬದುಕಲಿಕ್ಕಾಗಿ, ಆಹಾರದ ಜೊತೆಗೆ ನೀರು ಅಗತ್ಯವಿಲ್ಲದ ಕೆಲವೇ ಕೆಲವು ಪ್ರಾಣಿಗಳಲ್ಲೊಂದು ಕೋಲಾ ಕರಡಿ.  

ಫೋಟೋ ೧: ಕಸ್ತೂರಿ ಎತ್ತು ........ ಕೃಪೆ: ಡ್ರೀಮ್ಸ್  ಟೈಮ್.ಕೋಮ್

ಫೋಟೋ ೨: ಅಮೇರಿಕಾದ ಒಪಾಸಮ್