ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 2)
6.ಭೂಮಿಯಲ್ಲಿರುವ ಅತ್ಯಂತ ಜಾಸ್ತಿ ಸಂಖ್ಯೆ ಜೀವಿಗಳಲ್ಲಿ (ಕೀಟಗಳ ನಂತರ) ಎರಡನೇ ಸ್ಥಾನದಲ್ಲಿರುವ ಜೀವಿ ಯಾವುದು? ಮೃದ್ವಂಗಿಗಳು (ಚಿಪ್ಪು ಇರುವ ಮೃದು ಶರೀರದ ಜೀವಿಗಳು)
7.ಸೌದಿ ಅರೇಬಿಯಾದ ಅರಮನೆಯಲ್ಲಿ ಈಗ 5,000ಕ್ಕಿಂತ ಅಧಿಕ ರಾಜಕುಮಾರರೂ ಅಷ್ಟೇ ಸಂಖ್ಯೆಯ ರಾಜಕುಮಾರಿಯರೂ ಇರಬಹುದು. ಸೌದಿ ಅರೇಬಿಯಾವನ್ನು 1932ರಿಂದ 1953ರ ವರೆಗೆ ಆಳಿದ ರಾಜ ಅಬ್ದುಲ್ ಅಜೀಜ್ ಇಬ್ನ್ ಔದ್‌ನ ಪತ್ನಿಯರ ಸಂಖ್ಯೆ ಮುನ್ನೂರು.
8.ಗಣಿತದ ಫಿಬೋನಾಚಿ ಶ್ರೇಣಿ ಬಹಳ ಕುತೂಹಲಕಾರಿ. (ಈ ಶ್ರೇಣಿಗೆ 13ನೇ ಶತಮಾನದ ಇಟಾಲಿಯ ಗಣಿತಜ್ನನ ಹೆಸರಿಡಲಾಗಿದೆ.) ಇದರಲ್ಲಿ, ಪ್ರತಿಯೊಂದು ಸಂಖ್ಯೆಯೂ ಅದರ ಹಿಂದಿನ ಎರಡು ಸಂಖ್ಯೆಗಳ ಮೊತ್ತಕ್ಕೆ ಸಮ:
1 + 1 = 2, 1 + 2 = 3, 2 + 3 = 5, 3 + 5 = 8, 5 + 8 = 13, 21, 34, 55, 89, 144, ಇತ್ಯಾದಿ.
ಸಸ್ಯಗಳ ಎಲೆಗಳ ಜೋಡಣೆಯ ಕೋನಗಳು (ವೃತ್ತದ 360 ಡಿಗ್ರಿಯ ಭಾಗವಾಗಿ) ಇದೇ ಶ್ರೇಣಿಯ ಸಂಖ್ಯೆಗಳ ಅನುಪಾತದಲ್ಲಿ ಇರುವುದು ವಿಶೇಷ ಎನ್ನುತ್ತದೆ ಸಸ್ಯಶಾಸ್ತ್ರ.
9.ನಿಕೋಲಸ್ ಬೌರ್-ಬಾಕಿ ಎಂಬ ಕೂಡು-ಗುಪ್ತನಾಮದಲ್ಲಿ ಫ್ರೆಂಚ್ ಗಣಿತಜ್ನರು “ಎಲಿಮೆಂಟ್ಸ್ ಆಫ್ ಮ್ಯಾತಮ್ಯಾಟಿಕ್ಸ್” ಎಂಬ ವಿಶ್ವಕೋಶ ಬರೆದಿದ್ದಾರೆ. ಅದರಲ್ಲಿ ಸಂಖ್ಯೆ “ಒಂದು" ಇದಕ್ಕೆ ಸಂಬಂಧಿಸಿದ ಸಂಗತಿಗಳ ಬಗ್ಗೆ 200 ಪುಟಗಳ ವಿವರಣೆ ಇದೆ.
10.ಯು.ಎಸ್.ಎ. ದೇಶದ ವಾಷಿಂಗ್ಟನ್ ಡಿ.ಸಿ.ಯ ರಾಷ್ಟ್ರೀಯ ಮಾನಕಗಳ ಬ್ಯೂರೋದಲ್ಲಿರುವ ಗಡಿಯಾರದಲ್ಲಿ ಸೆಸಿಯಮ್ ಪರಮಾಣುಗಳನ್ನು ಬಳಸಲಾಗಿದ್ದು, ಇದು 300 ವರುಷಗಳಲ್ಲಿ ಕೇವಲ ಒಂದು ಸೆಕೆಂಡು ತಪ್ಪುತ್ತದೆ.