ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 4)

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 4)

16.“ತಿರುಗಾಮುರುಗಾ” ಪದಗಳು ಅಂದರೆ ಮುಂದಕ್ಕೆ ಅಥವಾ ಹಿಂದಕ್ಕೆ ಓದಿದಾಗ ಅಕ್ಷರಜೋಡಣೆ ಬದಲಾಯಿಸದ ಪದಗಳು. ಉದಾಹರಣೆ: ಸರಸ, ಚಮಚ, ಕಟುಕ ಇತ್ಯಾದಿ. ಗಣಿತದಲ್ಲಿಯೂ ಇಂತಹ “ತಿರುಗಾಮುರುಗಾ ಸಂಖ್ಯೆ”ಗಳಿವೆ. ಉದಾಹರಣೆ:
     21978 x 4 = 87912
     10989 x 9 = 98901

ಇಂತಹ ವಿಪರ್ಯಯ (ರಿವರ್ಸ್) ಸಂಖ್ಯೆಗಳ ಇನ್ನಷ್ಟು ಉದಾಹರಣೆಗಳು (ಕೂಡುವಿಕೆ ಮತ್ತು ಗುಣಿಸುವಿಕೆ ಸಹಿತ) ಹೀಗಿವೆ:
          9    + 9 = 18         81 = 9 x 9
          24  + 3 = 27         72 = 3 x 24
          47  + 2 = 49         94 = 2 x 47
          497+ 2 = 499     994 = 2 x 497

17.ಇಲ್ಲಿದೆ 2520 ಎಂಬ ಕುತೂಹಲಕಾರಿ ಸಂಖ್ಯೆ. ಇದನ್ನು 1, 2, 3, 4, 5, 6, 7, 8, 9 ಮತ್ತು 10ರಿಂದ
     (ಹಾಗೆಯೇ 12, 14, 15, 18, 20, 21, 24 ಇತ್ಯಾದಿ ಸಂಖ್ಯೆಗಳಿಂದ) ಶೇಷವಿಲ್ಲದೆ ಭಾಗಿಸಬಹುದು.

18.ಇನ್ನೊಂದು ಕುತೂಹಲಕಾರಿ ಸಂಖ್ಯೆ 37. ಇದನ್ನು ಯಾವುದೇ ಸಂಖ್ಯೆಯಿಂದ (ಇದರಿಂದಲೇ ಮತ್ತು ಸಂಖ್ಯೆ 1ರಿಂದ ಹೊರತಾಗಿ) ಶೇಷವಿಲ್ಲದೆ ಭಾಗಿಸಲು ಸಾಧ್ಯವಿಲ್ಲ. ಆದರೆ, ಈ ಕೆಳಗಿನ ಸಂಖ್ಯೆಗಳನ್ನು 37 ಶೇಷವಿಲ್ಲದೆ ಭಾಗಿಸುತ್ತದೆ:
     111, 222, 333, 444, 555, 666, 777, 888, 999

19.ಎಲ್ಲ ಹತ್ತು ಏಕಸ್ಥಾನದ ಅಂಕೆಗಳನ್ನು ಬಳಸಿ (ಪ್ರತಿಯೊಂದು ಅಂಕೆಯನ್ನು ಒಮ್ಮೆ ಮಾತ್ರ ಬಳಸಿ) ಅಂಕೆ 1 ಬರೆಯುವ ಒಂದು ವಿಧಾನ ಹೀಗಿದೆ:
     (148 / 296) + (35 / 70) = 1 ಅಂದರೆ 1/2  +  1/2  = 1
ಇದೇ ರೀತಿಯಲ್ಲಿ 100 ಬರೆಯುವ ಒಂದು ವಿಧಾನ ಹೀಗಿದೆ:
     50 1/2 + 49 38/76 = 100  (ಗಮನಿಸಿ: 38 / 76 = 1/2) ಅಂದರೆ ಐವತ್ತೂವರೆ + ನಲುವತ್ತೊಂಬತ್ತುವರೆ
ಹೀಗೆ 100 ಬರೆಯುವ ಇನ್ನೂ ಮೂರು ವಿಧಾನಗಳಿವೆ.

20.ಹತ್ತರಿಂದ ಹದಿನಾಲ್ಕರ ವರೆಗಿನ ಕ್ರಮಾಗತ ಸಂಖ್ಯೆಗಳನ್ನು ಗುಣಿಸಿದಾಗ ಸಿಗುವ ಏಕರೂಪದ ಗುಣಲಬ್ಧಗಳನ್ನು ಇಲ್ಲಿ ಕೊಡಲಾಗಿದೆ.
     (10 x 10) + (11 x 11) + (12 x 12) = 365
                       (13 x 13) + (14 x 14) = 365
ಗಮನಿಸಿ: ಇವು ಇಂತಹ ಏಕಮಾತ್ರ ಉದಾಹರಣೆಗಳು. ಜೊತೆಗೆ, ಈ ಗುಣಲಬ್ಧಗಳು ಒಂದು ವರುಷದ ದಿನಗಳಿಗೆ ಸಮಾನ ಎಂಬುದು ಕಾಕತಾಳೀಯ.