ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 5)

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 5)

21.ಮೂರು ಏಕಸ್ಥಾನದ ಅಂಕೆಗಳನ್ನು ಬಳಸಿ ಬರೆಯಬಹುದಾದ ಅತ್ಯಂತ ದೊಡ್ಡ ಸಂಖ್ಯೆ: 9 ಘಾತ 9 ಘಾತ 9.
(9 ಟು ದ ಪವರ್ ಆಫ್ 9 ಟು ದ ಪವರ್ ಆಫ್ 9) ಅಂದರೆ 9 ಘಾತ 387420489.
ಇದರ ಸಂಪೂರ್ಣ ರೂಪ ಯಾರಿಗೂ ತಿಳಿದಿಲ್ಲ. ಇದರ ಆರಂಭದ ಅಂಕೆಗಳು 428124773…. ಮತ್ತು ಇದರಲ್ಲಿ   ದಶಲಕ್ಷ ಅಂಕೆಗಳಿವೆ ಎಂಬುದಷ್ಟೇ ತಿಳಿದಿದೆ. ಈ ದೈತ್ಯ ಸಂಖ್ಯೆಯನ್ನು ಓದಲು ಕೆಲವು ವರುಷಗಳೇ ತಗಲುತ್ತವೆ.

22.ಒಂಭತ್ತನ್ನು ಐದು ಸಲ ಬಳಸಿ 10 ಬರೆಯುವ ಎರಡು ವಿಧಾನಗಳು ಹೀಗಿವೆ:
     9 + (99 / 99) = 10
     (99 / 9) - (9 / 9) = 10

23.ಹಾಗೆಯೇ, ಅಂಕೆ 8 ಮಾತ್ರ ಬಳಸಿ, 1000 ಬರೆಯುವ ಎರಡು ವಿಧಾನಗಳು ಇಂತಿವೆ:
     (8888 - 888) / 8 = 1000

     {(8 + 8) / 8} x (8 x 8 x 8 - 8) - 8 = 1000

ಇದನ್ನು ಸರಳೀಕರಿಸಿದಾಗ: {2 x (512 - 8)} - 8 ಅಂದರೆ 1008 - 8 = 1000

24.ಇಪ್ಪತ್ತನೆಯ ಶತಮಾನದಿಂದ ಸಂಖ್ಯೆ 10 ಅನ್ನು ಲೆಕ್ಕಾಚಾರಕ್ಕಾಗಿ ಆಧಾರವಾಗಿ (ಬೇಸ್ ಆಗಿ) ಬಳಸಲಾಗುತ್ತಿದೆ. ಆದರೆ, ಫ್ರಾನ್ಸಿನ ಗೌಲ್ ಜನಾಂಗದವರು, ಮಧ್ಯ ಅಮೇರಿಕಾದ ಮಾಯಾ ಜನಾಂಗದವರು ಮತ್ತು ಇತರ ಕೆಲವು ಜನಾಂಗದವರು ಸಂಖ್ಯೆ 20 ಅನ್ನು  ಆಧಾರವಾಗಿ ಬಳಸುತ್ತಿದ್ದರು. ಸುಮೇರಿಯದವರು, ಬೇಬಿಲೋನಿಯದವರು ಮತ್ತು ಇತರ ಕೆಲವು ಜನಾಂಗದವರು ಸಂಖ್ಯೆ 60 ಅನ್ನು ಆಧಾರವಾಗಿ ಬಳಸುತ್ತಿದ್ದರು. ಯಾಕೆಂದರೆ, 2,3,4,5,6,10,12,15, 20 ಮತ್ತು 30 ಇವುಗಳಿಂದ 60 ಅನ್ನು ಶೇಷವಿಲ್ಲದೆ ಭಾಗಿಸಬಹುದು. ಈಗಲೂ ಸಂಖ್ಯೆ 60, ಒಂದು ಗಂಟೆಯ ನಿಮಿಷಗಳಾಗಿ ಮತ್ತು ಒಂದು ನಿಮಿಷದ ಸೆಕೆಂಡುಗಳಾಗಿ ಹಾಗೂ ಒಂದು ವೃತ್ತದ 360 ಡಿಗ್ರಿಗಳಾಗಿ ಬಳಕೆಯಲ್ಲಿದೆ.

25.ಸಂಖ್ಯೆ 11,111,111 ಅನ್ನು ಇದರಿಂದಲೇ ಗುಣಿಸಿದಾಗ ಸಿಗುವ ವಿಶೇಷ ಸಂಖ್ಯೆ: 123456787654321