ಹೀಗೇಕೆ...?
ಬರಹ
ಸಮುದ್ರದಲ್ಲಿರುವ ಚಿಪ್ಪು ಸ್ವಾತಿಯ ಮಳೆಹನಿಗಾಗಿ ಕಾಯುವುದೇಕೆ..?
ದೂರದಲ್ಲಿ ಇರುವ ಕೋಗಿಲೆ ಮಾಮರದ ಚಿಗುರಿನ ಋತುವಿಗೆ ಹಾತೊರೆಯುವುದೇಕೆ...?
ಹಸಿದ ಕಂದಮ್ಮ ತನ್ನ ಅಮ್ಮನಿಗಾಗಿ ಅಳುವುದೇಕೆ...?
ಪ್ರೀತಿ ಮಾಡುವ ಹುಡುಗ ತನ್ನ ಹುಡುಗಿಗೆ ಸಮಯ ವ್ಯರ್ಥಮಾಡುವುದೇಕೆ...?
ದೂರದೂರಿನಲ್ಲಿ ಒಂಟಿಯಿದ್ದಾಗ ಮನಸ್ಸು ಮನೆಕಡೆ ಮುಖಮಾಡಿ ಹಲಬುವುದೇಕೆ...?
ಎಲ್ಲೋ ಕಳೆದುಹೋದ ಸಮಯವಾ ನೆನೆದು ಮನವು ನೋವು-ನಲಿವಿನಿಂದ ಕೊರಗುವುದೇಕೆ...?
ಹು:.....
ತಾನು ಒಂದಲ್ಲಾ ಒಂದು ದಿನ ಮಣ್ಣಲ್ಲಿ ಬೆರೆತು ಹೋಗುತ್ತೇನೆ ಎಂದು ಗೊತ್ತಿದ್ದರೂ ಮನುಜ ಈ ಜಗಕೆ ತಾನೇ ದೊಡ್ಡವನೆಂದು ಮೆರೆಯುವುದೇಕೆ...?