ಹೀಗೇ ಸುಮ್ಮನೆ : Feel my love ಗೆಳತಿ, ಒಮ್ಮೇ ಒಮ್ಮೆ.
ನಿನ್ನ ಅಪ್ಪುಗೆಯ ಬಿಗುವಲ್ಲಿ ನಾ ಕರಗಬೇಕೊಮ್ಮೆ ಗೆಳತಿ
ನಿನ್ನ ಮುತ್ತುಗಳ ಮಳೆಯಲ್ಲಿ ನಾ ತೋಯಬೇಕೊಮ್ಮೆ ಗೆಳತಿ
ನಿನ್ನ ಬಿಸಿಯುಸಿರ ಬೇಗೆಯಲ್ಲಿ ನಾ ಬೇಯಬೇಕೊಮ್ಮೆ ಗೆಳತಿ
ನಿನ್ನ ನೆನಪುಗಳ ಗುಂಗಿನಲಿ ನಾ ನನ್ನೇ ಮರೆಯಬೇಕೊಮ್ಮೆ ಗೆಳತಿ
ನಿನ್ನ ಕಂಗಳ ಬೆಳಕಲ್ಲಿ ನಾ ಕುರುಡಾಗಬೇಕೊಮ್ಮೆ ಗೆಳತಿ
ನಿನ್ನ ಗುಂಡಿಗೆಯ ನಗಾರಿಯಲ್ಲಿ ನಾ ಕಿವುಡಾಗಬೇಕೊಮ್ಮೆ ಗೆಳತಿ
ನಿನ್ನ ಪಿಸುಮಾತಿನ ನಿನಾದದಿ ನಾ ಮೂಗನಾಗಬೇಕೊಮ್ಮೆ ಗೆಳತಿ
ನಿನ್ನೊಳಗೆ ನಾನಾಗಿ, ನಾನಿಲ್ಲದಂತಾಗಿ, ನಿನಗೆ ನನ್ನನ್ನೇ ನಾ ಒಪ್ಪಿಸಿಕೊಳ್ಳಬೇಕೊಮ್ಮೆ ಗೆಳತಿ